ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು – 2002 ರ ಬ್ಯಾಚ್ ನ ಮಂಜುನಾಥ ಮೆಣಸಿನಕಾಯಿ ಇನ್ನೂ ನೆನಪು ಮಾತ್ರ
ಹುಬ್ಬಳ್ಳಿ –
ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಮಂಜುನಾಥ ಮೆಣಸಿನಕಾಯಿ ಮೃತ ಪೊಲೀಸ್ ಪೇದೆಯಾಗಿದ್ದು ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಇವರು ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.2002 ರಲ್ಲಿ ಇಲಾಖೆಗೆ ಸೇರಿಕೊಂಡಿದ್ದ ಇವರು ನಗರದ ಪೂರ್ವ ಸಂಚಾರಿ ಠಾಣೆಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದರು.ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಕರ್ತವ್ಯಕ್ಕೆ ಗೈರಾಗಿದ್ದ ಇವರು ಮನೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದರು.ಮನೆಯಲ್ಲಿದ್ದಾಗ ತೀವ್ರವಾಗಿ ಎದೆನೋವು ಕಾಣಿಸಿಕೊಂಡಿತು ಇನ್ನೇನು ಆಸ್ಪತ್ರೆಗೆ ತೆರಳಬೇಕು ಎನ್ನುಷ್ಟರಲ್ಲಿ ಮಂಜುನಾಥ ಮೆನಸಿನಕಾಯಿ ದಾರಿ ಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ.ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಇನ್ನೂ ನಿಧನರಾದ ಪೊಲೀಸ್ ಪೇದೆಯ ನಿಧನಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಠಾಣೆಯ ಇನಸ್ಪೇಕ್ಟರ್ ಐವಾನ್ ಡಿಸೋಜಾ,ಪಿಎಸ್ ಐ ಪುನೀತ್ ಕುಮಾರ ಸೇರಿದಂತೆ ಸಿಬ್ಬಂದಿಗಳು ಸ್ನೇಹಿತರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.ಮೃತರ ಅಂತ್ಯಕ್ರಿಯೆ ತವರೂರಿನ ಕಮಡೊಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ.ಇಲಾಖೆಯಲ್ಲಿ ದಕ್ಷತೆ ಮತ್ತು ಒಳ್ಳೆಯ ಕರ್ತವ್ಯಕ್ಕೆ ಹೆಸರಾಗಿದ್ದರು ಮಂಜುನಾಥ.
ಉದಯ ವಾರ್ತೆ ಹುಬ್ಬಳ್ಳಿ