ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ. ಉತ್ತಮ ಗುಣಮಟ್ಟದ ಜೀವನ ನಡೆಸಲು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯು ಸಹಾಯ ಮಾಡುತ್ತದೆ. ಆದರೆ, ಅನೇಕರು ಶಸ್ತ್ರಚಿಕಿತ್ಸೆ ಎಂದಾಕ್ಷಣ ಭಯ ಪಡುತ್ತಾರೆ.
ಪ್ರಮುಖವಾಗಿ ವಯಸ್ಸಾದವರಿಗೆ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದಾಗಂತೂ ಹಲವು ಹಿಂಜರಿಯುವುದುಂಟು. ಇದಕ್ಕೆ ಕಾರಣ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಗಾಲಿಕುರ್ಚಿಯ ಜೀವನಕ್ಕೆ ಕಾರಣವಾಗುತ್ತದೆ ಎಂಬ ತಪ್ಪು ಕಲ್ಪನೆ.
ವಯಸ್ಸಾದ ಜನರು ಸಮತೋಲಿತ ಆಹಾರವನ್ನು ತಿನ್ನುವುದು ಮತ್ತು ಎಷ್ಟು ಸಾಧ್ಯವೋ ಅಷ್ಟು ನಡೆಯುವುದರ ಮೂಲಕ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಸ್ಯೆಯಿಂದ ದೂರ ಉಳಿಯಬರುದು.
ವಾಕಿಂಗ್: ಬೆನ್ನು ನೋವು ಎಂದು ದೀರ್ಘಕಾಲ ಮಲಗುವುದರಿಂದ ಬೆನ್ನುಹುರಿಯೊಂದಿಗೆ ಸಂಪರ್ಕ ಹೊಂದಿರುವ ಸ್ನಾಯುಗಳು ದುರ್ಬಲಗೊಳ್ದೆಳುತ್ತಾ ಸಾಗುತ್ತವೆ. ಈ ಹಿನ್ನೆಲೆಯಲ್ಲಿ ಸದಾ ಮಲಗಿಕೊಂಡೇ ಇರುವುದಕ್ಕಿಂತ ಎದ್ದು ನಡೆಯುವುದು ಉತ್ತಮ ಪರಿಹಾರವಾಗಿದೆ. ನಡಿಗೆಯು ಅತ್ಯಂತ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಬೆನ್ನಿನ ಎರಡು ಬದಿಯ ಸ್ನಾಯುವನ್ನು ಇದು ಬಲಗೊಳಿಸುತ್ತದೆ. ಹಲವು ಅಧ್ಯಯನಗಳ ಪ್ರಕಾರ,
ವಾರದಲ್ಲಿ ಕನಿಷ್ಠ ಮೂರರಿಂದ ಐದು ದಿನ ಸರಿ ಸುಮಾರು 130 ನಿಮಿಷದ ನಡಿಗೆ ಕೂಡ ಬೆನ್ನು ನೋವನ್ನು ಯಾವುದೇ ಚಿಕಿತ್ಸೆ ಇಲ್ಲದೇ ದುಪ್ಪಟ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ವಾಕಿಂಗ್ ಎಂಬುದು ಯಾವುದೇ ವೆಚ್ಚವಿಲ್ಲದೇ ಪಡೆಯುವ ಅತ್ಯುತ್ತಮ ಬೆನ್ನು ನೋವಿನ ಚಿಕಿತ್ಸೆಯಾಗಿದೆ.ವಾಕಿಂಗ್ ಅನ್ನು ಅನೇಕ ಮಂದಿ ಬಹಳ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ನಡೆಯುವಾಗ ಆಗುವ ಸ್ನಾಯುಗಳ ಚಲನೆ ಬೆನ್ನು ನೋವಿಗೆ ಸಹಾಯ ಮಾಡುತ್ತದೆ. ಜೊತೆಗೆ ನಡಿಯುವಾಗ ದೇಹ ಮತ್ತು ಮಿದುಳಿನಲ್ಲಿರುವ ನೋವಿನ ಸಿಗ್ನಲ್ ಅನ್ನು ತಡೆಯುತ್ತದೆ.
ಫಿಸಿಯೋಥೆರಪಿಸ್ಟ್: ಪಿಸಿಯೋಥೆರಪಿಸ್ಟ್ಗಳು ನೀಡುವ ಕೆಲವು ವಿಶೇಷ ವ್ಯಾಯಾಮಗಳು ಕೂಡ ಬೆನ್ನು ನೋವಿನ ಉಪಶಯಮನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಯೋಗ: ಯೋಗದ ಕೆಲವು ಆಸನಗಳು ಕೂಡ ಬೆನ್ನು ನೋವಿನಿಂದ ನಿಮಗೆ ವಿಶ್ರಾಂತಿ ನೀಡುತ್ತದೆ. ನಿಯಮಿತವಾಗಿ ಪ್ರಯಾಣ ಬೆಳೆಸುತ್ತಿದ್ದರೆ, ಇದರಿಂದ ಬೆನ್ನು ನೋವು ಉಲ್ಬಣವಾಗುವುದು ಸಹಜ. ಇವುಗಳ ಶಮನಕ್ಕೆ ಯೋಗದ ವ್ಯಾಯಾಮಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಯೋಗ ನೋವಿನ ಜೊತೆಗೆ ಒಟ್ಟಾರೆ, ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವ್ಯಾಯಾಮಗಳು ಮೆಡಿಸಿನ್ ರೀತಿ ಕಾರ್ಯ ನಿರ್ವಹಿಸುವುದು ಸುಳ್ಳಲ್ಲ.