ಯಾದಗಿರಿ:-ಮೂಲತ: ಕೊಪ್ಪಳ ಜಿಲ್ಲೆಯವನಾದ ಪಿಎಸ್ಐ ಪರಶುರಾಮ ಮೊನ್ನೆ ತಾನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯಾದಗಿರಿ ಪಿಎಸ್ಐ ಪರಶುರಾಮ ಅವರ ಲೈಪ್ ಸ್ಟೋರಿಯೇ ಒಂದು ಚಾಲೇಂಜಿಂಗ್.ಪಿಯುಸಿ ಫೇಲಾಗಿ ಪಿಎಸ್ಐ ಆದ ಪರಶುರಾಮನ ಧಾರುಣ ಸ್ಟೋರಿ ಇದು.
ವಿಜ್ಞಾನ ವಿಭಾಗದಲ್ಲಿ ಪಿಯುಸಿ ಫೇಲಾಗಿ ಮಾನಸಿಕವಾಗಿ ನೊಂದು ಬೆಂಗಳೂರಿನಲ್ಲಿ ಗಲ್ಪ್ ಮೈದಾನದಲ್ಲಿ ಮೈದಾನದಲ್ಲಿ ನೀರು ಬಿಡೋದು ಬಾಲ ತರೋ ಕೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ.
ಅಲ್ಲಿಂದ ಯಾವುದಾದರೂ ಸರಕಾರಿ ಕೆಲಸ ಪಡೆಯಬೇಕೆಂದು ಮರಳಿ ಊರಿಗೆ ಬಂದು ಕಲಾ ವಿಭಾಗಕ್ಕೆ ಸೇರಿ ಕಲಾ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ ಪರಶುರಾಮ ನಂತರ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಡಿಗ್ರಿ ಪಡೆದಿದ್ದ.
ಡಿಗ್ರಿ ಮೂರನೇ ವರ್ಷದಲ್ಲಿ ಓದುತ್ತಿದ್ದಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜೈಲು ವಾರ್ಡರ್ ಆಗಿ ನೇಮಕ ಆಗಿದ್ದ.ನಂತರ ಪಿಎಸ್ಐ ಪರೀಕ್ಷೆ ಬರೆದು ಅದರಲ್ಲಿಯೂ ಆಯ್ಕೆಯಾಗಿ ಕಮಲಪುರ ಪೋಲೀಸ ಠಾಣೆಗೆ ಮೊದಲ ಪೋಸ್ಟಿಂಗ್ ಪಡೆದು ದಿಟ್ಟ ಸೇವೆ ಮಾಡುವ ಪಿಎಸ್ಐ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದ.
ಇಂತಹ ದಿಟ್ಟ ಹೋರಾಟಗಾರ ಪಿಎಸ್ಐಗೆ ಸಾವಿನ ಪ್ರಶಸ್ತಿ ಸಿಕ್ಕಿರುವುದು ಪೋಲೀಸ ಇಲಾಖೆಗೆ ಒಂದು ಕಪ್ಪು ಚುಕ್ಕೆ ಅಂತಾನೇ ಹೇಳಬಹುದು.