ಕಾಂಗ್ರೆಸ್ ಸರಕಾರದಲ್ಲಿ ಪೋಲೀಸ ಠಾಣೆಗಳನ್ನು ಹರಾಜಿಗಿಟ್ಟಿದ್ದಾರೆ.ಬೇಸ್ ಪ್ರೈಜ್ ಗಳ ಮೇಲೆ ಠಾಣೆಗಳು ಹರಾಜು ಆಗತಾ ಇವೆ ಜೋಶಿ.

Share to all

ಕಾಂಗ್ರೆಸ್ ಸರಕಾರದಲ್ಲಿ ಪೋಲೀಸ ಠಾಣೆಗಳನ್ನು ಹರಾಜಿಗಿಟ್ಟಿದ್ದಾರೆ.ಬೇಸ್ ಪ್ರೈಜ್ ಗಳ ಮೇಲೆ ಠಾಣೆಗಳು ಹರಾಜು ಆಗತಾ ಇವೆ ಜೋಶಿ.

ಹುಬ್ಬಳ್ಳಿ:- ರಾಜ್ಯ ಸರಕಾರ ಪೋಲೀಸ ಠಾಣೆಗಳನ್ನು ಹರಾಜಿಗಿಟ್ಟಿದೆ.ಮೊದಲು ಹರಾಜು ಕೂಗಬೇಕಿತ್ತು.ಈಗ ಆನಲೈನ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಾನು ಅಧಿಕಾರಿಗಳ ಬಗ್ಗೆ ಮಾತನಾಡೋದಿಲ್ಲಾ.ಸರಕಾರ ಪೋಲೀಸ ಠಾಣೆಗಳನ್ನು ಹರಾಜಿಗಿಟ್ಟಿದ್ದಾರೆ. ಮೊದಲು ಹರಾಜ ಕೂಗಬೇಕಿತ್ತು.ಇವಾಗ ಆನಲೈನ್ ಆಗಿದೆ.ಬೇಸ್ ಪ್ರೈಸ್ ಮೇಲೆ ಠಾಣೆಗಳನ್ನು ಹರಾಜಿಗಿಟ್ಟಿದ್ದಾರೆ.ಅಧಿಕಾರಿಗಳು ಕೆಲಸ ಮಾಡ್ತಾರೋ ಇಲ್ಲವೋ ನೋಡಲ್ಲ.ಹರಾಜಿನ ಮೂಲಕ ಟ್ರಾನ್ಸಫರ್ ಆಗತಾ ಇವೆ.

ಹಣ ಕೊಟ್ಟು ಪೋಸ್ಟಿಂಗ್ ತೆಗೆದುಕೊಂಡ ಮೇಲೆ ಅಧಿಕಾರಿಗಳು ಅನಿವಾರ್ಯವಾಗಿ ಕಲೆಕ್ಸನ್ ನಿಲ್ಲಬೇಕಾಗುತ್ತೇ.ಇದು ಅಧಿಕಾರಿಗಳ ತಪ್ಪಲ್ಲ ಸರಕಾರದ ತಪ್ಪು ಎಂದು ಜೋಶಿ ಹೇಳಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author