operationa Ajay Success ತಾಯ್ನಾಡಿಗೆ ಮರಳಿದ ಭಾರತೀಯರು.

Share to all

operationa Ajay Success ತಾಯ್ನಾಡಿಗೆ ಮರಳಿದ ಭಾರತೀಯರು – ಯುದ್ದ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತಂದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಶಾಸಕ ಅರವಿಂದ ಬೆಲ್ಲದ

ಹುಬ್ಬಳ್ಳಿ –

ಹಮಾಸ್ ಉಗ್ರರ ದಾಳಿಯಿಂದ ಮತ್ತು ಯುದ್ಧ ಪೀಡಿತ ಪ್ರದೇಶ ಇಸ್ರೇಲ್ ದೇಶದಲ್ಲಿ ವಾಸವಾಗಿದ್ದ 200 ಕ್ಕೂ ಹೆಚ್ಚು ಬಾರತೀಯರನ್ನು ಆಪರೇಶನ್ ವಿಜಯದ ಮೂಲಕ ಭಾರತಕ್ಕೆ ಕರೆ ತರಲಾಗಿದೆ.ಹೌದು ನಮ್ಮ ದೇಶದ 212 ಅವಿವಾಸಿ ಭಾರತೀಯರನ್ನು ಆಪರೇಷನ್ ವಿಜಯ್ ದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ವಿದೇಶಾಂಗ ಸಚಿವಾಲಯ ಕರೆದುಕೊಂಡು ಬರಲಾಗಿದೆ.ಯಾವುದೇ ಸಂದರ್ಭದಲ್ಲಿ ಯಾವುದೇ ದೇಶದಲ್ಲಿ ನಮ್ಮ ಭಾರತೀಯರು ಸಂಕಷ್ಟಕ್ಕೆ ಒಳಗಾದ ಸೂಚನೆ ದೊರೆತ ತಕ್ಷಣ ನಮ್ಮ ವಿದೇಶಾಂಗ ಸಚಿವಾಲಯ ಕಾರ್ಯೋನ್ಮುಖವಾಗಿ ಅವರಿಗೆ ಯಾವುದೇ ತರಹದ ಅಪಾಯವಾಗದಂತೆ ತಾಯ್ನಾಡಿಗೆ ಮರಳಿಸುವ ಜವಾಬ್ದಾರಿಯನ್ನು ಹೊತ್ತು ಶ್ರಮವಹಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುತ್ತದೆ.
ವಿದೇಶಾಂಗ ಸಚಿವಾಲಯದ ಈ ಮಹತ್ತರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದು ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾಳಜಿ ಮತ್ತು ಸುಸ್ಥಿರ ಆಡಳಿತ ವ್ಯವಸ್ಥೆಗೆ ಕೈಗನ್ನಡಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಬಣ್ಣಿಸಿದ್ದಾರೆ ಇನ್ನೂ ಇದರೊಂದಿಗೆ ಮತ್ತೊಮ್ಮೆ ಸಮರ್ಥ ನಾಯಕನ ಕೈಯಲ್ಲಿ ನಮ್ಮ ಭಾರತ ಮತ್ತು ಭಾರತೀಯರು ಎಂದಿಗೂ ಸುರಕ್ಷಿತ ಎಂಬುದು ಸಾಬೀತಾಗಿದೆ ಎಂದಿದ್ದಾರೆ.ಈ ಮಹತ್ವದ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿಗಳಿಗೆ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಶಾಸಕರು ಸಲ್ಲಿಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author