ಬೆಂಗಳೂರು:-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ನಗರದಲ್ಲಿ ಎಷ್ಟೇ ಕಠಿಣ ಕ್ರಮಗಳು ಜಾರಿಯಲ್ಲಿ ಇದ್ದರೂ ನಾವು ಮಾಡಿದ್ದೇ ಮಾಡೋದು ಎಂಬಂತೆ ಪುಡಾರಿಗಳು ವರ್ತನೆ ಮಾಡುತ್ತಿದ್ದಾರೆ.
ಹೌದು, ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಕುಕೃತ್ಯಕ್ಕೆ ಕೊನೆಯೇ ಇಲ್ವಾ? ತಮ್ಮ ಮನೆ ಮುಂದೆ ವಾಹನ ನಿಲ್ಲಿಸಿದ್ರು ಸೇಫ್ ಅಲ್ಲ ಬೆಂಗಳೂರಿನಲ್ಲಿ. ಇಂತವರ ಕೃತ್ಯಗಳಿಗೆ ಬ್ರೇಕ್ ಯಾವಾಗ? ಪೊಲೀಸರು ಈ ಸುದ್ದಿ ನೋಡಲೇಬೇಕಾಗಿದೆ.ಎಸ್, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಮನೆ ಮುಂದೆ ನಿಲ್ಲಿಸಿರೋ ಕಾರ್ ಮೇಲೆ ಪುಂಡ
ರು ಅಟ್ಟಹಾಸ ಮೆರೆದಿದ್ದಾರೆ. ನಿಂತಿದ್ದ ಕಾರ್ ನ್ನ ಕಿಡಿಗೇಡಿಗಳು ಡ್ಯಾಮೇಜ್ ಮಾಡಿದ್ದಾರೆ.
ಬೆಂಗಳೂರಿನ ಫ್ರೇಜರ್ ಟೌನ್ ನ ಮೂರೇ ರೋಡ್ ನಲ್ಲಿ ಘಟನೆ ಜರುಗಿದೆ. ನಿನ್ನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ಜರುಗಿದೆ. ರಸ್ತೆಯಲ್ಲಿ ನಡೆದು ಬಂದ ಇಬ್ಬರು ಯುವಕರಿಂದ ನಿಂತಿದ್ದ ಕಾರ್ ಡ್ಯಾಮೇಜ್ ಮಾಡಿ ವಿಕೃತಿ ಮೆರೆದಿದ್ದಾರೆ. ಸದ್ಯ ಯುವಕರ ಕಿಡಿಗೇಡಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಆದಷ್ಟು ಬೇಗ ಇಂತವರ ಕೃತ್ಯಕ್ಕೆ ಬ್ರೇಕ್ ಹಾಕಲು ಮುಂದಾಗಬೇಕಾಗಿದೆ.