ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಗೆ 32 ರನ್ ಗಳ ಸೋಲು: ನಾನು ಆಡೋದೇ ಹೀಗೆ ಎಂದ ರೋಹಿತ್!

Share to all

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಏಕದಿನ ಪಂದ್ಯದ ಸೋಲಿಗೆ ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಕಾರಣವಾಗಿದ್ದು, ಲಂಕಾ ದಾಳಿಗೆ ಉತ್ತರಿಸಲಾಗದೆ ಬ್ಯಾಟರ್​ಗಳು ಪೆವಿಲಿಯನ್ ಸೇರಿದ್ರು.

ಆರಂಭಿಕ ಆಟಗಾರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿರುಸಿದ ಆಟವಾಡಿ ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಮತ್ಯಾವ ಆಟಗಾರರು ನೀರೀಕ್ಷಿತ ಪ್ರದರ್ಶನ ತೋರಲಿಲ್ಲ. ಎರಡೂ ಏಕದಿನ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದ ರೋಹಿತ್ ಅರ್ಧಶತಕ ಗಳಿಸಿದ್ದರು. ಆದ್ರೆ ಸೋಲಿನ ಬಳಿಕ ತಾವು ಆಟವಾಡುವ ರೀತಿಯನ್ನು ಬದಲಿಸಿಕೊಳ್ತಾರಾ? ಎಂಬ ಪ್ರಶ್ನೆಗೆ ಸಾಧ್ಯವಿಲ್ಲ ಎಂದಿದ್ದಾರೆ.

ಪಂದ್ಯ ಸೋಲಿನ ಬಳಿಕ ಪ್ರತಿಕ್ರಿಯಿಸಿರು ರೋಹಿತ್ ಶರ್ಮಾ, ನಾನು ಬ್ಯಾಟಿಂಗ್ ಮಾಡಿದ ರೀತಿಯೇ 65 ರನ್ ಗಳಿಸಲು ಕಾರಣವಾಗಿದ್ದು. ಸಾಕಷ್ಟು ರಿಸ್ಕ್ ತೆಗೆದುಕೊಂಡು ನಾನು ಹಾಗೆ ಬ್ಯಾಟಿಂಗ್ ಮಾಡುತ್ತೇನೆ. ನನ್ನ ಬ್ಯಾಟಿಂಗ್ ಶೈಲಿ ಹೀಗೆಯೇ ಮುಂದುವರಿಯಲಿದೆ, ನಿದಾನಗತಿಯಲ್ಲಿ ಬ್ಯಾಟ್ ಬೀಸಲ್ಲ ಎಂದು ರೋಹಿತ್ ಹೇಳಿದ್ದಾರೆ.

ಇಂಟೆಂಟ್ ವಿಚಾರದಲ್ಲಿ​ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಈ ಪಿಚ್​ನ ಸ್ವರೂಪವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಮಧ್ಯಮ ಓವರ್‌ಗಳಲ್ಲಿ ಈ ಪಿಚ್​ನಲ್ಲಿ ಬ್ಯಾಟಿಂಗ್​ ಮಾಡಲು ಕಠಿಣವಾಗುತ್ತದೆ. ಹೀಗಾಗಿ ಪವರ್‌ಪ್ಲೇನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ರನ್ ಪಡೆಯಲು ಪ್ರಯತ್ನಿಸಬೇಕು ಎಂದು ರೋಹಿತ್ ತಿಳಿಸಿದ್ದಾರೆ.

ಪಂದ್ಯ ಸೋತಾಗ ಎಲ್ಲವೂ ನೋವುಂಟುಮಾಡುತ್ತದೆ. ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫರಾಗಿದ್ದು, ಸ್ವಲ್ಪ ನಿರಾಶೆ ಆಗಿದೆ. ಪಂದ್ಯದಲ್ಲಿ ನಾವು ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಗಮನಹರಿಸಲು ಬಯಸುವುದಿಲ್ಲ. ಆದರೆ ಮಿಡಲ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಟೀಮ್​ ಇಂಡಿಯಾ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ್ದಾರೆ.

ಲಂಕಾ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 42.2 ಓವರ್​ಗಳಲ್ಲಿ 208ಕ್ಕೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಪಂದ್ಯದಲ್ಲಿ ರೋಹಿತ್ ಶರ್ಮಾ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 64 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದ್ದರು. ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾ ಏಕದಿನ ಸರಣಿಯಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದೆ. ಉತ್ತಮವಾಗಿ ಬೌಲಿಂಗ್​ ಮಾಡಿದ ಜೆಫ್ತಿ ವಾಂಡರ್ಸೆ ಭಾರತದ ಮೊದಲ 6 ವಿಕೆಟ್ ಪಡೆದು ಲಂಕಾ ಗೆಲುವಿಗೆ ಕಾರಣರಾದ್ರು.


Share to all

You May Also Like

More From Author