ಹುಬ್ಬಳ್ಳಿಯಲ್ಲಿ ನಗರ ಸ್ವಚ್ಚತೆ ಪರಿಶೀಲಿಸಿದ ಕಮೀಷನರ್.ಒಳ್ಳೆ ಕೆಲಸ ಮಾಡಿದ ಆರೋಗ್ಯ ನಿರೀಕ್ಷಕರ ಬೆನ್ನುತಟ್ಟಿ,, ಕೆಲಸದಲ್ಲಿ ನಿರ್ಲಕ್ಷ್ಯ ತೋರಿದವರಿಗೆ ಎಚ್ಚರಿಕೆ ನೀಡಿದ ಆಯುಕ್ತರು.
ಹುಬ್ಬಳ್ಳಿಯಲ್ಲಿ ನಗರ ಸ್ವಚ್ಚತೆ ಪರಿಶೀಲಿಸಿದ ಕಮೀಷನರ್.ಒಳ್ಳೆ ಕೆಲಸ ಮಾಡಿದ ಆರೋಗ್ಯ ನಿರೀಕ್ಷಕರ ಬೆನ್ನುತಟ್ಟಿ,, ಕೆಲಸದಲ್ಲಿ ನಿರ್ಲಕ್ಷ್ಯ ತೋರಿದವರಿಗೆ ಎಚ್ಚರಿಕೆ ನೀಡಿದ ಆಯುಕ್ತರು.
ಹುಬ್ಬಳ್ಳಿ:- ಇಂದು ಬೆಳೆಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:- ಈಶ್ವರ. ಉಳ್ಳಾಗಡ್ಡಿ ಅವರು ವಾಕಿಂಗ್ ಜೊತೆ ನಗರ ಸ್ವಚ್ಚತೆ ಬಗ್ಗೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ಕ್ಲೀನಿಂಗ್ ಮತ್ತು ಕಸವಿಲೇವಾರಿ ವೀಕ್ಷಿಸಿದರು.
ನಗರದ ಜೋನ್ 8 ಮತ್ತು 9 ರ ವ್ಯಾಪ್ತಿಯ ದಾಜೀಬಾನಪೇಟೆ,ಡಾಕಪ್ಪ ಸರ್ಕಲ್,ಜವಳಿಸಾಲ ಬೆಳಗಂ ಗಲ್ಲಿ,ಸಿಬಿಟಿ,ಮರಾಠ ಗಲ್ಲಿ,ಬ್ರಾಡವೇ,ಹಾಗೂ ದುರ್ಗದ ಬೈಲ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಸ ವಿಲೇವಾರಿಯಲ್ಲಿ ಒಳ್ಳೆ ಕೆಲಸ ಮಾಡಿದ ಪಾಲಿಕೆಯ ಸಿಬ್ಬಂದಿಗಳಿಗೆ ಬೆನ್ನು ತಟ್ಟಿದ ಕಮೀಷನರ್ ಕೆಲಸ ಮಾಡದ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.ಅಲ್ಲದೇ ಪುಟ್ಟಪಾತ ಅತೀಕ್ರಮಣ ಮಾಡಿದವರಿಗೆ ಕಮೀಷನರ್ ವಾರ್ನಿಂಗ್ ಕೊಟ್ಟಿದ್ದಾರೆ.