ಮಹಿಳೆಯರೇ ಇಲ್ಲಿ ಕೇಳಿ: ಈ ದಿನಾಂಕದಂದು ನಿಮ್ಮ ಖಾತೆಗೆ ಜಮೆ ಆಗಲಿದೆ ಗೃಹಲಕ್ಷ್ಮಿ ಹಣ; DCM ಕೊಟ್ರೂ ಸ್ಪಷ್ಟನೆ!

Share to all

ಬೆಂಗಳೂರು :- ಕಳೆದ ಎರಡು ತಿಂಗಳಿಂದ ಜಮೆ ಆಗದ ಗೃಹಲಕ್ಷ್ಮಿ ಯೋಜನೆ ಬಗ್ಗೆ DCM ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಮದ್ದೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭಾಷಣ ಮಾಡುತ್ತ, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬರ್ತಿದೆಯೋ? ಇಲ್ವೋ? ಎಂದು ಪ್ರಶ್ನಿಸಿದರು. ಆಗ ವೇದಿಕೆ ಮುಂಭಾಗದಲ್ಲಿದ್ದ ಮಹಿಳೆಯರು ಬರುತ್ತಿಲ್ಲ, ಬರುತ್ತಿಲ್ಲ ಎಂದು ಕೂಗಿದರು. ಆಗ ಡಿಕೆ ಶಿವಕುಮಾರ್​ ಬರುತ್ತೆ ಬರುತ್ತೆ ಕಾಯುತ್ತಿರಿ. ಕಳೆದ ಒಂದು, ಎರಡು ತಿಂಗಳ ಗೃಹಲಕ್ಷ್ಮಿ ಹಣ ಮಾತ್ರ ನಿಮ್ಮ ಖಾತೆ ಜಮೆ ಆಗಿಲ್ಲ. ಅನುದಾನ ಬಿಡುಗಡೆಯಾಗಿದೆ. ಶ್ರೀಘವೇ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂದರ್ಭದಲ್ಲಿ ಏಪ್ರಿಲ್​​ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಲೆ ಪಾವತಿ ಮಾಡಲಾಗಿತ್ತು. ಇದೀಗ ಕಾರಣಾಂತರಗಳಿಂದ ಜೂನ್​ ಮತ್ತು ಜುಲೈ ತಿಂಗಳ ಹಣ ಪಾವತಿ ಬಾಕಿ ಉಳಿದಿದೆ. ಈ ಹಣ ಅಗಸ್ಟ್​ ವಾರಾಂತ್ಯದೊಳಗೆ ಜಮಾವಣೆಯಾಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಗೃಹಲಕ್ಷ್ಮಿ ಹಣ ನೇರ ಲಾಭ ವರ್ಗಾವಣೆ ಮೂಲಕ ಮನೆಯ ಯಜಮಾನಿ ಖಾತೆಗೆ ತಲಪುತ್ತದೆ. ಈಗಾಗಲೆ 10 ತಿಂಗಳ ಹಣ ನೀಡಲಾಗಿದೆ. ಒಟ್ಟು 20 ಸಾವಿರ ರೂ. ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ಎರಡು ತಿಂಗಳ ಹಣ ಅಂದರೆ ಒಟ್ಟು 4 ಸಾವಿರ ರೂ. ಅನ್ನು ಫಲಾನುಭವಿಗಳ ಕೈ ಸೇರಲಿದೆ.


Share to all

You May Also Like

More From Author