ಈಜಲು ಹೋಗಿ ಮುಳುಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ.
ಕಾರವಾರ:-ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಐದು ಜನ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದರು.
ಸಮುದ್ರಕ್ಕಿಳಿದಿದ್ದ ಸಿದ್ದಾರ್ಥ(24) ದೀಕ್ಷಿತ್ (20) ಸಂತೋಷ (24) ಈಜಾಡುತ್ತಾ ಸಮುದ್ರದ ಒಳಗೆ ಹೋದಾಗ ಅಲೆಗಳ ರಭಸಕ್ಕೆ ಸಿಲುಕಿ ಅಪಾಯದಲ್ಲಿ ಸಿಲುಕಿದ್ದರು.ಮೂವರು ಯುವಕರು ಮುಳುಗುತ್ತಿರುವುದನ್ನ ಗಮನಿಸಿದ ಲ್ಯೆಪ್ ಗಾಡ್೯ಗಳು ತಕ್ಷಣ ಸಮುದ್ರಕ್ಕಿಳಿದು ಮುಳುಗುತ್ತಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ.ಲ್ಯೆಪ್ ಗಾರ್ಡಗಳಾದ ಚಂದ್ರಶೇಖರ ದೇವಾಡಿಗ,ಜಯರಾಮ, ಪಾಂಡು,ಹನಮಂತವರೇ ಮೂವರು ಯುವಕರನ್ನು ರಕ್ಷಣೆ ಮಾಡಿದವರು.ಲ್ಯೆಪ್ ಗಾಡ್೯ಗಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಉದಯ ವಾರ್ತೆ ಕಾರವಾರ