ನೆಲಮಂಗಲ: ಮನುಷ್ಯನ ಜೀವನವೇ ಹಾಗೆ. ಯಾವ ಟೈಮಲ್ಲಿ ಏನೋ ಎಂಬಂತೆ ಇವಾಗಿದ್ದವರೂ ಸ್ವಲ್ಪ ಹೊತ್ತಲ್ಲಿ ಇರುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಅದರಂತೆ ಇಲ್ಲೊಬ್ಬ ವ್ಯಕ್ತಿ ಊರಿಂದ ಬಂದು ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ.
ಹೌದು, ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೋಟಗಾನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ ಮನಕಲಕುವ ಘಟನೆ ಜರುಗಿದೆ. ದೃಶ್ಯದಲ್ಲಿ ವ್ಯಕ್ತಿಯ ಸಾವಿನ ಕೊನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 45 ವರ್ಷದ ಶ್ರೀನಿವಾಸ್ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ.
ಮನೆಗೆ ವಾಪಸ್ ಬರುವ ವೇಳೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೊನೆ ಕ್ಷಣದ ಪ್ರಾಣ ಪಕ್ಷಿಯ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾರೆ.ಒಟ್ನಲ್ಲಿ ಮನುಷ್ಯನ ಆಯಸ್ಸಿಗೆ ಯಾವುದೇ ಗ್ಯಾರಂಟಿ, ವಾರಂಟಿ ಇಲ್ಲ. ಇದ್ದಷ್ಟು ದಿನ ಖುಷಿಯಿಂದ ಹೋಗಬೇಕು ಅಷ್ಟೇ.