ಕಂದಾಯ ಅಧಿಕಾರಿ ಪಾಲಿಕೆಯಿಂದ ರಿಲೀವ್ ಆಗಿ ಒಂದು ವರ್ಷ..ಆದರೂ ಪಾಲಿಕೆಯನ್ನು ಬಿಡತಿಲ್ಲಾ ಸಬರದ ಸಾಹೇಬ್ರು.ಸಂಬಳ ಇಲ್ಲದೇ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರವ ಸಾಹೇಬ್ರಗೆ ಅಗಸ್ಟ್ 15 ರಂದು ಸನ್ಮಾನ ಮಾಡತಾರಾ ಮೇಯರ್ ಸಾಹೇಬ್ರು.
ಕಂದಾಯ ಅಧಿಕಾರಿ ಪಾಲಿಕೆಯಿಂದ ರಿಲೀವ್ ಆಗಿ ಒಂದು ವರ್ಷ..ಆದರೂ ಪಾಲಿಕೆಯನ್ನು ಬಿಡತಿಲ್ಲಾ ಸಬರದ ಸಾಹೇಬ್ರು.ಸಂಬಳ ಇಲ್ಲದೇ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರವ ಸಾಹೇಬ್ರಗೆ ಅಗಸ್ಟ್ 15 ರಂದು ಸನ್ಮಾನ ಮಾಡತಾರಾ ಮೇಯರ್ ಸಾಹೇಬ್ರು.
ಹುಬ್ಬಳ್ಳಿ:- ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಸಂಬಳ ಬಂದಿಲ್ಲಾ ಅಂತಾ ಪ್ರತಿಭಟನೆ ಮಾಡುವ ನೌಕರರು,ಇನ್ನೊಂದು ಕಡೆ ಸಂಬಳ ಪಡೆಯದೇ ಒಂದು ವರ್ಷ ಪಾಲಿಕೆಯಲ್ಲಿ ಸೇವೆ.
ಪಾಲಿಕೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ಹಸಿರು ಪೆನ್ನು ಹಿಡಿದು ಕಂದಾಯ ಅಧಿಕಾರಿ ಅಂತಾ ಗಟ್ಟಿಯಾಗಿ ಕುಳಿತಿರುವ ಎಂ ಬಿ ಸಬರದ ಅವರು.ಆ ಹುದ್ದೆ ಸಾಲದು ಎಂದು ರಾಜಕೀಯ ಒತ್ತಡದಿಂದ ಮತ್ತೊಂದು ಜೋನಲ್ ಕಮೀಷನರ್ ಆಗಿ ಹಗಲು ರಾತ್ರಿ ಎನ್ನದೇ ಸಂಬಳ ಇಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ.
ಸಬರದ ಸಾಹೇಬ್ರು ಎರಡೆರಡು ಹುದ್ದೆಯಲ್ಲಿ ಸಂಬಳ ಇಲ್ಲದೇ ಕೆಲಸ ಮಾಡುತ್ತಿರುವುದು ಪಾಲಿಕೆಯ ಮೇಯರಗಾಗಲಿ ಸದಸ್ಯರಿಗಾಗಲಿ ಕಂಡೇ ಇಲ್ಲಾ.ಈಗಲಾದರೂ ಸಂಬಳವಿಲ್ಲದೇ ಕೆಲಸ ಮಾಡುವ ಈ ಅಧಿಕಾರಿಯನ್ನು ಬರುವ ಅಗಸ್ಟ್ 15 ರಂದು ಸನ್ಮಾನ ಮಾಡತಾರಾ ಕಾದು ನೋಡ ಬೇಕಾಗಿದೆ.