ಹುಬ್ಬಳ್ಳಿ
ಕ್ರಿಕೆಟ್ ಬೆಟ್ಟಿಂಗ್ ಅಂದರೆ ಹುಬ್ಬಳ್ಳಿ ಹೆಸರು ಕಾಣಿಸಿಕೊಳ್ಳುವುದೇ ಮೊದಲು.
ಬೆಟ್ಟಿಂಗ್ ನ ಎಲ್ಲಾ ಆಳ, ಅಗಲ,ಉದ್ದ ಎಲ್ಲವನ್ನೂ ಸಂಪೂರ್ಣ ಸರ್ವೇ ಮಾಡಿರುವ ಖಡಕ್ ಲೇಡಿ ಸಿಂಗಂ ರೇಣುಕಾ ಸುಕುಮಾರ ಬೆಟ್ಟಿಂಗ ಕುಳಗಳ ಹೆಡಮುರಿ ಕಟ್ಟಲು ಸಜ್ಜಾಗಿದ್ದಾರೆ.ಮೇಡಂ ನಿರ್ಧೇಶನದಂತೆ ನಿನ್ನೆ ಮತ್ತು ಇಂದು ಹುಬ್ಬಳ್ಳಿ, ಧಾರವಾಡದಲ್ಲಿ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ ಮೂವರನ್ನು ಹೆಡಮುರಿ ಕಟ್ಟಿ ಬೆಟ್ಟಿಂಗ ದಂಧೆ ಕೋರರಿಗೆ ನಡುಕ ಹುಟ್ಟಿಸಿದ್ದಾರೆ.ಧಾರವಾಡ ಶಹರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಓರ್ವ ಹಾಗೂ ಹುಬ್ಬಳ್ಳಿಯ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.
ಧಾರವಾಡದ ಮಹ್ಮದ ಶರೀಫ.ನಧಾಫ ಹಾಗೂ ಹುಬ್ಬಳ್ಳಿಯ ಸಿರಾಜ್ ಅಹ್ಮದ ಮುಲ್ಲಾ ಮತ್ತು ಸಮೀರ್ ತರಗಾರ ಮೇಲೆ ಬೆಟ್ಟಿಂಗ್ ಪ್ರಕರಣ ದಾಖಲಿಸಿದ್ದಾರೆ.ಆರೋಪಿತರಿಂದ ನಗದು ಹಣ,ಮೋಬ್ಯೆಲ್ ಹಾಗೂ ಬೆಟ್ಟಿಂಗ್ ಗೆ ಬಳಸಿದ ಇನ್ನಿತರ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬೇರು ಮಟ್ಟದಿಂದ ಬೆಟ್ಟಿಂಗ್ ದಂಗೆಯನ್ನು ಕಿತ್ತೊಗೆಯಲು ಪಣ ತೊಟ್ಟಿರುವ ಲೇಡಿ ಸಿಂಗಂ ಬೆಟ್ಟಿಂಗಗೆ ಸಂಭಂದಿಸಿದಂತೆ ಪೋಲೀಸ ಅಧಿಕಾರಿಗಳ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರಂತೆ.ಹುಬ್ಬಳ್ಳಿಯಲ್ಲಿ ಲೇಡಿ ಕಮೀಷನರ್ ಏನ್ಮಾಡ್ತಾರೆ ಅನ್ನಕೊಳ್ಳವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡ್ತಿದ್ದರೆ ಖಡಕ್ ಪೋಲೀಸ ಆಯುಕ್ತರು.
ಉದಯ ವಾರ್ತೆ ಹುಬ್ಬಳ್ಳಿ