ಒಲಿಂಪಿಕ್ಸ್​ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್!

Share to all

ಪ್ಯಾರಿಸ್ ಒಲಂಪಿಕ್ಸ್​ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ವಿನೇಶ್ ಫೋಗಟ್‌ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಫೈನಲ್ ತಲುಪುವ ಮೂಲಕ ವಿನೇಶ್ ಫೋಗಟ್ ಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಗೆದ್ದರೆ, ವಿನೇಶ್ ಫೋಗಟ್ ಕುಸ್ತಿಯಲ್ಲಿ ಹಳದಿ ಕಾರ್ಡ್ ಗೆದ್ದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸೆಮಿಸ್ ಬೌಟ್ ನಲ್ಲಿ ಕ್ಯೂಬಾದ ಕುಸ್ತಿಪಟು ಗೂಸ್ ಮ್ಯಾನ್ ವಿರುದ್ಧ ಗೆಲುವು ಪಡೆದರು. 5-0 ಅಂತರದ ಏಕಪಕ್ಷೀಯ ಗೆಲುವು. ಬುಧವಾರ ಅಂತಿಮ ಹಣಾಹಣಿ ನಡೆಯಲಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ವಿನೇಶ್‌ ಪೋಗಟ್‌. ಉತ್ತಮ ಟ್ಯಾಕ್ಟಿಸ್‌ ಬಳಸುವ ಮೂಲಕ ಎದುರಾಳಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಮೊದಲ ಮೂರು ನಿಮಿಷಗಳಲ್ಲಿ ಕೇವಲ ಒಂದು ಅಂಕ ಗಳಿಸಿದ ವಿನೇಶ್ ಫೋಗಟ್ ನಂತರದ ಮೂರು ನಿಮಿಷಗಳಲ್ಲಿ 4 ಅಂಕ ಗಳಿಸಿದರು.

ಮೊದಲ ಸುತ್ತಿನಲ್ಲಿ, ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಪಾನಿನ ಕುಸ್ತಿಪಟು ಯುಯು ಸುಸಾಕಿ ವಿರುದ್ಧ ಸಂವೇದನಾಶೀಲ ಗೆಲುವು ಸಾಧಿಸಿದರು. ಆರಂಭದಲ್ಲಿ ಸುಸಾಕಿ 2 ಅಂಕ ಗಳಿಸಿ ಮುನ್ನಡೆ ಸಾಧಿಸಿದರು. ಆದರೆ ಇನ್ನೊಂದು ನಿಮಿಷದಲ್ಲಿ ಪಂದ್ಯ ಮುಗಿಯುತ್ತಿದ್ದಂತೆ ವಿನೇಶ್ ಫೋಗಟ್ ಅದ್ಭುತ ಹೋರಾಟದ ಮೂಲಕ ಪಂದ್ಯ ಗೆದ್ದರು. ನಂ.1 ಶ್ರೇಯಾಂಕದ ಸುಸಾಕಿ ವಿರುದ್ಧದ ಗೆಲುವಿನಿಂದ ಫೋಗಟ್ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು, ಕ್ವಾರ್ಟರ್ ಫೈನಲ್‌ನಲ್ಲಿ, ಒಕ್ಸಾನಾ ಲಿವಾಚ್ ವಿರುದ್ಧ ಉತ್ತಮ ಜಯ ಸಾಧಿಸಿದರು.


Share to all

You May Also Like

More From Author