ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಾರ್ & ರೆಸ್ಟೋರೆಂಟ್ ಮಾಲೀಕರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಇನ್ಮುಂದೆ ಮಧ್ಯರಾತ್ರಿ 1 ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮಧ್ಯರಾತ್ರಿಯಿಂದಲೇ ಬೆಂಗಳೂರಿನಾದ್ಯಂತ ಈ ಹೊಸ ಆದೇಶ ಜಾರಿಯಾಗುತ್ತಿದೆ. ಹೌದು.. ಮಧ್ಯರಾತ್ರಿ ಒಂದು ಗಂಟೆ ವರೆಗೂ ಬಾರ್ ಆಯಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ ಸರ್ಕಾರ ಮಹಾನಗರಗಳಲ್ಲಿ ಬಾರ್ ಆಯಂಡ್ ರೆಸ್ಟೋರೆಂಟ್‌ಗಳಿಗಿದ್ದ ನಿರ್ಭಂದ ಸಡಿಲಿಕೆ ಮಾಡಿದೆ.
ಬೆಂಗಳೂರು ಸೇರಿ 10ಮಹಾನಗರ ವ್ಯಾಪ್ತಿಯ ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ನಿರ್ಬಂಧ ಸಡಿಲಿಕೆ ಮಾಡಿದ್ದು ಬಾರ್ ಆಯಂಡ್ ರೆಸ್ಟೋರೆಂಟ್ ದಿನವಿಡಿ ತೆರೆಯಲು ಅವಕಾಶ ಕೇಳಿದ್ದ ಹೋಟೆಲ್ ಅಸೋಸಿಯೇಷನ್ ಸದ್ಯ ಮಧ್ಯರಾತ್ರಿ ಒಂದು ಗಂಟೆ ವರೆಗೇ ಅವಕಾಶ ನೀಡಿ ಆದೇಶಿಸಿರುವ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ-ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿ ವಿಸ್ತರಣೆ ಮಾಡಲಾಗಿದೆ.
ಬೆಳಗ್ಗೆ 06.00 ಗಂಟೆಯಿಂದ ಮಾರನೇ ದಿನ ಮುಂಜಾನೆ 01.00 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಹಾಗೆ ಲೇಟ್ ನೈಟ್ ಬಾರ್ ತೆರೆಯಲು ಸಹ ಅವಕಾಶ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಲೇಟ್ ನೈಟ್ ವ್ಯಾಪಾರದಿಂದಾಗಿ ಲಾಭ ಜಾಸ್ತಿಯಸಗುವ ಸಾಧ್ಯತೆ ಈ ಹಿನ್ನೆಲೆ ಬಾರಿ ಸಂತೋಷ ವ್ಯಕ್ತ ಪಡಿಸಿದ ಮಾಲೀಕರು.