ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಫೋಗಟ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ವಿನೇಶ್ ಇಂದು ಮಧ್ಯಾಹ್ನ 12:45 ಕ್ಕೆ ಯುಎಸ್ಎ ಕುಸ್ತಿಪಟು ವಿರುದ್ಧ ಚಿನ್ನದ ಪದಕದ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ನಿನ್ನೆ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಅವರ ತೂಕ ನಿಗದಿಗಿಂತ ಹೆಚ್ಚಿತ್ತು.
ಹೀಗಾಗಿ ತಂಡವು ರಾತ್ರಿಯಿಡೀ ಅವರ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ಇಂದು ಬೆಳಿಗ್ಗೆ ನಡೆದ ತೂಕ ಪರೀಕ್ಷೆಯಲ್ಲಿ ಅವರ ತೂಕವು 50 ಕೆಜಿಗಿಂತ ಸ್ವಲ್ಪ ಹೆಚ್ಚಿತ್ತು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಸದ್ಯಕ್ಕೆ ಭಾರತ ತಂಡದಿಂದ ಯಾವುದೇ ಪ್ರತಿಕ್ರಿಯೆ ನಿರೀಕ್ಷಿಸುವಂತಿಲ್ಲ. ಜೊತೆಗೆ ವಿನೇಶ್ ಅವರ ಗೌಪ್ಯತೆಯನ್ನು ಗೌರವಿಸಲು ನಾವೆಲ್ಲರೂ ನಿಮ್ಮನ್ನು ವಿನಂತಿಸುತ್ತೇವೆ. ಇದರಿಂದ ನಾವು ಮುಂಬರುವ ಈವೆಂಟ್‌ನತ್ತ ಗಮನ ಹರಿಸಬಹುದು ಎಂದು ಐಒಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.