ಬೆಂಗಳೂರು:- ನಾಲ್ಕಂತಸ್ಥಿನ ಬಿಲ್ಡಿಂಗ್ ಮೇಲೆ ನಿಂತು ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಶೇಷಾದ್ರಿಪುರಂ ಕಾಲೇಜು ಹಿಂಬಾಗದಲ್ಲಿ ಹೊಸದಾಗಿ ನಿರ್ಮಾಣವಾಗ್ತಿರೊ ನಾಲ್ಕಂತಸ್ಥಿನ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ಮಂಜು ಎಂಬ ಯುವಕನಿಂದ ಈ ರೀತಿ ಆತ್ಮಹತ್ಯೆಗೆ ಯತ್ನಿಸಲಾಗುತ್ತಿದೆ. ನನ್ನನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದರು. ನಾನು ತುಂಬಾ ಚೆನ್ನಾಗಿ ಓದುತ್ತಿದೆ. ನಾನು ಈಗ ಇಲ್ಲಿಂದ ಹಾರಿ ಸಾಯ್ತಿನಿ ಅಂತ ಬೆದರಿಸುತ್ತಿದ್ದಾನೆ.
ತಾನು ಹುಣಸಮಾರನಹಳ್ಳಿಯ ಮಂಜುನಾಥ್ ಅಂತ. ಆಸ್ತಿಯ ವಿಚಾರವಾಗಿ ನನಗೆ ಕಿರುಕುಳ ಕೊಟ್ಟಿರೋದಾಗಿ ಪೊಲೀಸರ ಮುಂದೆ ಮಾಹಿತಿ ನೀಡಿದ್ದಾನೆ. ನನ್ನ ಕೆಜಿ ಹಳ್ಳಿಯ ಜನರಲ್ ಆಸ್ಪತ್ರೆಗೆ ಸೇರಿಸಿದ್ರು. ಗಾಂಜಾ ಸೇವನೆ ಮಾಡ್ತಿಯ ಅಂತ ಹೇಳಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ರು.
ಕುಟುಂಬಸ್ಥರು ನನ್ನ ಹೆಂಡತಿಯನ್ನ ನನ್ನಿಂದ ದೂರು ಮಾಡಿದರು. ವಿಷವಿಟ್ಟು ಕೊಲ್ಲಲು ಪ್ರಯತ್ನ ಪಟ್ಟರು. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದೀನಿ. ನನಗೆ ನ್ಯಾಯ ಬೇಕು ನನ್ನ ಮೊಬೈಲ್ನಲ್ಲಿ ಎಲ್ಲ ರಹಸ್ಯ ಇದೆ. ನಾನು ಕೆಳಗೆ ಬಂದ್ರೆ ಹುಚ್ಚ ಅನ್ನೋ ಪಟ್ಟ ಕಟ್ಟುತ್ತಾರೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಯುವಕ ಆರೋಪಿಸುತ್ತಿದ್ದಾನೆ. ಇನ್ನೂ ಬಿಲ್ಡಿಂಗ್ ಮೇಲಿಂದ ಯುವಕನನ್ನು ಇಳಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಎಷ್ಟೆ ಮನವಲಿಸಿದ್ರೂ ಇಳಿಯಲು ಯುವಕ ಒಪ್ಪುತ್ತಿಿಲ್ಲ. ನನ್ನನ್ನ ಸಾಯಲು ಬಿಡಿ ಎಂದು ಯುವಕ ಹೇಳುತ್ತಿದ್ದಾನೆ.