ಖಾಸಗಿ ಏಜೆನ್ಸಿಗಳಿಗೆ ಸಿಡಿಆರ್ ಲೀಸ್ಟ್ ಕೊಡ್ತಾ ಇದ್ದಿದ್ದೇ ಒರ್ವ ಪೋಲಿಸಪ್ಪ ಸದ್ಯ ಖತರ್ನಾಕ್ ಕಿಲಾಡಿ ಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಸಿಐಡಿಯಲ್ಲಿ ಕೆಲಸ ಮಾಡ್ತಾ ಇದ್ದ ಮುಖ್ಯಪೇದೆ ಮುನಿರತ್ನ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಸಿಐಡಿಯಲ್ಲಿ ಈ ಮುನಿರತ್ನ ಸಿಡಿಆರ್ ಅನಲಾಸಿಸ್ ಆಗಿ ಕೆಲಸ ಮಾಡ್ತಾ ಇದ್ದ. ಈ ಪೊಲೀಸಪ್ಪನಿಗೆ ಕೆಲ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಪರಿಚಯ ಇತ್ತು. ಅದ್ರಲ್ಲಿ ಮುಖ್ಯವಾಗಿ ನಾಗೇಶ್ವರ್ ರೆಡ್ಡಿಯದ್ದು.
ಇನ್ನು ಈ ನಾಗೇಶ್ವರ್ ರೆಡ್ಡಿ ಜೊತೆ ಕೆಲ ವರ್ಷಗಳಿಂದ ಹಲವರ ಮೊಬೈಲ್ ನಂಬರ್ ಸಿಡಿಆರ್ ಪಡೆದಿದ್ದ. ಯಾವುದಾದರೂ ಅಧಿಕೃತ ಕೇಸಲ್ಲಿ ಇವತಿಗೆ ಬೇಕಾದವರ ನಂಬರ್ ಹಾಕಿ ಅದರ ಸಿಡಿಆರ್ ಪಡೆದು ನಾಗೇಶ್ವರ್ ರಾವ್ ಗೆ ಕೊಡ್ತಾ ಇದ್ದ. ಒಂದು ಸಿಡಿಆರ್ ಗೆ ನಾಗೇಶ್ವರೆಡ್ಡಿ 20-25 ಸಾವಿರ ತಗೋತಾ ಇದ್ದು, ಮುನಿರತ್ನಗೆ ಐದು ಸಾವಿರ ಕೊಡ್ತಾ ಇದ್ದರು. ಕರ್ನಾಟಕ, ಆಂಧ್ರಾ, ತಮಿಳುನಾಡು ಸೇರಿ ಹತ್ತಾರು ರಾಜ್ಯಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ನಂಬರ್ ಗಳನ್ನು ಅನಧಿಕೃತವಾಗಿ ಸಿಡಿಆರ್ ರಿಪೋರ್ಟ್ ಮಾರಾಟ ಮಾಡಿರೋದು ಬಯಲಾಗಿದೆ.
ಕಳೆದ ಮೇ ತಿಂಗಳಲ್ಲಿ ಸಿಸಿಬಿ ಪೊಲೀಸರು ಕೆಲ ಖಾಸಗಿ ಡಿಟಕ್ಟೀವ್ ಏಜೆನ್ಸಿಗಳ ಮೇಲೆ ದಾಳಿ ಮಾಡಿತ್ತು. ವೇಳೆ ಪೊಲೀಸ್ ಇಲಾಖೆಯಲ್ಲೇ ಸಿಡಿಆರ್ ಕೊಡ್ತಾ ಇರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಆರೋಪಿ ನಾಗೇಶ್ವರರೆಡ್ಡಿಯಲ್ಲಿ ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಪಿಸಿ ಮುನಿರತ್ನ ಹೆಸರು ಹೇಳಿದ್ದಾನೆ. ಬಳಿಕ ಮುನಿರತ್ನನ ಅರೆಸ್ಟ್ ಮಾಡಿದಾಗ ಮತ್ತಷ್ಟು ಭಯಾನಕ ವಿಚಾರಗಳು ಹೊರಬಿದ್ದಿವೆ. ಅದು ಕೂಡ ಪೊಲೀಸ್ ಇಲಾಖೆಯಲ್ಲಿನ ಕೆಲ ಅಧಿಕಾರಿಗಳ ಪತ್ನಿಯರು ತಮ್ಮ ಗಂಡಂದಿರ ಸಿಡಿಆರ್ ರಿಪೋರ್ಟ್ ನ ಹಣ ಕೊಟ್ಟು ಖಾಸಗಿ ಡಿಟೆಕ್ವಿವ್ ಏಜೆನ್ಸಿಗಳಿಂದ ಪಡೆದಿರೋದು. ಅದು ಕೂಡ ಕೊಟ್ಟಿರೋದು ಈ ಮುನಿರತ್ನ ಅಂತ. ಹೀಗಾಗಿ ಮುನಿರತ್ನನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ಕಸ್ಟಡಿಗೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ.