ಹುಬ್ಬಳ್ಳಿ ಗಬ್ಬೂರ ಮಡ್೯ರ್ ಕೇಸ್ ಮತ್ತೆ ನಾಲ್ವರು ಆರೆಸ್ಟ. ಬಂಧಿತರ ಸಂಖ್ಯೆ ಐದಕ್ಕೆ.
ಕಳೆದ ಬುಧವಾರ ಒಂದು ಗುಂಪಿನಿಂದ ಸೋಮನಗೌಡ ಎಂಬ ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿ ಬೆಂಡಿಗೇರಿ ಪೋಲೀಸರು ಜ್ಯೆಲಿಗಟ್ಟಿದ್ದಾರೆ.ಕೊಲೆ ಆದ ದಿನವೇ ಹೊನ್ನಪ್ಪ ಕೋಗೋಡ ಎಂಬುವರನ್ನು ಪೋಲೀಸರು ಬಂದಿಸಿದ್ದರು.ಇಂದು ಪುಟ್ಟು ಕೋಗೋಡ.ಪ್ರದೀಪ.ಕೋಗೋಡ.ಮಂಜು ಕೋಗೋಡ.ಪವನ ಉಠದಾರಿಯನ್ನು ಆರೆಸ್ಟ ಮಾಡಿದ್ದಾರೆ. ಬಂಧಿತರ ಸಂಖ್ಯೆ ಈ ಪ್ರಕರಣದಲ್ಲಿ ಐದಕ್ಕೇರಿದೆ.ಇನ್ನೂ ಬಂಧಿತರ ಸಂಖ್ಯೆ ಹೆಚ್ಚಾಗುತ್ತಾ.ಅಥವಾ ಇಷ್ಟಕ್ಕೇ ಮುಗೀತಾ ಕಾದು ನೋಡಬೇಕಾಗಿದೆ.
ಈ ಒಂದು ಚಾಕು ಇರಿತದ ಹಿಂದೆ ಎರಡು ಹೆಣ್ಣಿನ ಲವ್ ಕಹಾನಿ ಇದೆ ಎನ್ನಲಾಗುತ್ತಿದೆ.ಒಂದು ಅಣ್ಣಿಗೇರಿ ಇನ್ನೊಂದು ಗಬ್ಬೂರ ಹೆಣ್ಣಿನ ಲಿಂಕ್ ಈ ಪ್ರಕರಣದಲ್ಲಿ ಥಳಕು ಹಾಕಿಕೊಳ್ಳುತ್ತಿದೆ ಎಂದು ಅಲ್ಲಿಯ ಜನರೇ ಮಾತಾಡಿಕೊಳ್ಳುತ್ತಿದ್ದಾರೆ.ಗಬ್ಬೂರಿನ ರಿಯಲ್ ಎಸ್ಟೇಟ್ ದಂಧೆ ಮಾಡುವ ಉ…..ನ ಕರೆಸಿ ಐವತ್ತು ಸಾವಿರ ದಂಡ ಯಾಕೆ ಕೊಟ್ಟರು ಅನ್ನೋದನ್ನ ಕೆದಕಿದರೆ ಎಲ್ಲವೂ ಬಹಿರಂಗವಾಗಲಿದೆ.ಇದೆಲ್ಲವನ್ನ ಮುಂದಿಟ್ಟಕೊಂಡು ಪೋಲೀಸರು ವಿಚಾರಣೆ ಮಾಡಿದರೆ ಆ ಹೆಣ್ಣು ಯಾರು ಅವಳ ಕಥೆ ಈ ಪ್ರಕರಣಕ್ಕೆ ಏನು ಸಂಭಂದ ಅನ್ನೋದು ಬಟಾಬಯಲಾಗಲಿದೆ.
ಉದಯ ವಾರ್ತೆ ಹುಬ್ಬಳ್ಳಿ