ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಒಲಿದು ಬಂತು ಪಾಲಿಕೆಯ ಸದಸ್ಯ ಸ್ಥಾನ.ಇನ್ಮುಂದೆ ಶ್ರೀನಿವಾಸ ಬೆಳದಡಿ ಪಾಲಿಕೆಯ ಕಾರ್ಪೋರೇಟರ್.

Share to all

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಒಲಿದು ಬಂತು ಪಾಲಿಕೆಯ ಸದಸ್ಯ ಸ್ಥಾನ.ಇನ್ಮುಂದೆ ಶ್ರೀನಿವಾಸ ಬೆಳದಡಿ ಪಾಲಿಕೆಯ ಕಾರ್ಪೋರೇಟರ್.

ಹುಬ್ಬಳ್ಳಿ:- ಪಕ್ಷ ಅಂತಾ ಬಂದರೆ ಹಗಲಿರುಳು ನಿಲ್ಲುವ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬೆಳದಡಿ ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಸ್ಥಾನ ಸಿಕ್ಕಿದೆ.ನಾಮ ನಿರ್ದೇಶಿತ ಸದಸ್ಯರನ್ನಾಗಿ ಸರಕಾರ ಆದೇಶ ಮಾಡಿದೆ.

 

ಕಾಂಗ್ರೆಸ್ ಎಸ್ ಸಿ ಘಟಕ,ಯುವ ಕಾಂಗ್ರೆಸ್, ಹೀಗೆ ಪಕ್ಷವಹಿಸಿದ ಹಲವಾರು ಹುದ್ದೆಗಳಲ್ಲಿ ಅಚ್ಚು ಕಟ್ಟಾಗಿ ಪಕ್ಷ ಸಂಘಟನೆಯಲ್ಲಿ ಭಾಗವಹಿಸಿ ಪಕ್ಷ ಬೆಳೆಸಿದ ಶ್ರೀನಿವಾಸ ಬೆಳದಡಿಯನ್ನು ಗುರುತಿಸಿದ ಪಕ್ಷ ಹಾಗೂ ಸ್ಲಂ ಬೋರ್ಡನ ಅದ್ಯಕ್ಷರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಅವರಿಗೆ ಶ್ರೀನಿವಾಸ ಬೆಳದಡಿ ಅಭಿನಂದನೆ ಸಲ್ಲಿಸಿದ್ದಾರೆ.

ಪಕ್ಷ ಅಂದರೆ ಪ್ರಾಣ ಎನ್ನುವ ಶ್ರೀನಿವಾಸ ಬೆಳದಡಿಗೆ ಪಾಲಿಕೆಯ ಸದಸ್ಯರಾಗಿ ಆಯ್ಕೆಗಿದ್ದಕ್ಕೆ ಸಂತಸ ತಂದಿದೆ.ಇನ್ನಷ್ಟು ಪಕ್ಷದ ಕೆಲಸ ಮಾಡುವ ಹುಮ್ಮಸ್ಶು ಬಂದಿದೆ.ನನ್ನ ನೆಚ್ಚಿನ ನಾಯಕ ಶ್ರೀ ಪ್ರಸಾದ ಅಬ್ಬಯ್ಯ ಸಾಹೇಬ್ರಿಗೆ ಅಭಿನಂದನೆ ಸಲ್ಲಿಸುವುದಾಗಿ ನೂತನ ಕಾರ್ಪೋರೇಟರ್ ಶ್ರೀನಿವಾಸ ಬೆಳದಡಿ ತಿಳಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author