Olympics: ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

Share to all

ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ 2ನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್ ಆಗಿದೆ. ಹೌದು ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು. ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಮತ್ತೆ ಫೌಲ್ ಆಗಿದ್ದರು.

ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಈ ನಂತರದ ಸ್ಥಾನದಲ್ಲಿ ನೀರಜ್ ಚೋಪ್ರಾ ಇದ್ದರು. 3,4,5 ನೇ ಪ್ರಯತ್ನದಲ್ಲಿಯೂ ನೀರಜ್ ಚೋಪ್ರಾ ಫೌಲ್ ಆದರು. ಜರ್ಮನಿಯ ಜೂಲಿಯನ್ ವೆಬರ್ 87.33 ಮೀಟರ್ ಭರ್ಜಿ ಎಸೆಯುವ ಮೂಲಕ 3 ನೇ ಸ್ಥಾನದಲ್ಲಿದ್ದರು. ಅರ್ಷದ್ ನದೀಮ್ ತಮ್ಮ 2ನೇ ಪ್ರಯತ್ನದ ಕೊನೆಯ ಎಸೆತದಲ್ಲಿ 84.47 ಮೀಟರ್ ಗಳಿಗೆ ಭರ್ಜಿ ಎಸೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್ ನಲ್ಲಿ 12 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.

 


Share to all

You May Also Like

More From Author