ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ.ನಾಲ್ಕು ಮಕ್ಕಳ ತಾಯಿಯ ಕೊಲೆ‌ ಶಂಕೆ..?ಚುರುಕುಗೊಂಡ ಪೋಲೀಸ ತನಿಖೆ..

Share to all

ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ.ನಾಲ್ಕು ಮಕ್ಕಳ ತಾಯಿಯ ಕೊಲೆ‌ ಶಂಕೆ..?ಚುರುಕುಗೊಂಡ ಪೋಲೀಸ ತನಿಖೆ..

ಕುಂದಗೋಳ:- ಕಳೆದ ತಿಂಗಳು 29 ರಂದು ಕಾಣೆಯಾಗಿದ್ದ ಮಹಿಳೆಯ ಶವವೊಂದು ಹಳ್ಳದಲ್ಲಿ ಪತ್ತೆಯಾದ ಘಟನೆ ಕುಂದಗೋಳ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ವಿಠ್ಠಲಾಪುರ ಗ್ರಾಮದ 29 ವಯಸ್ಸಿನ ಮಂಜುಳಾ ಚಂದ್ರಗೌಡ ಹುತ್ತನಗೌಡರ ಎಂಬುವಳು ಕಾಣೆಯಾದ ಬಗ್ಗೆ ಕುಂದಗೋಳ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಈಗ ಆ ಮಹಿಳೆಯ ಶವ ಬೆಣ್ಣಿ ಹಳ್ಳದಲ್ಲಿ ಪತ್ತೆಯಾಗಿದೆ.

ಮಹಿಳೆಯ ಶವವು ಹತ್ತು ದಿನಗಳ ನಂತರ ದೊರೆತಿದ್ದು ನೀರಿನಲ್ಲಿ ಮೀನುಗಳು ಶವವನ್ನು ತಿಂದಿರುವ ಹಿನ್ನೆಲೆಯಲ್ಲಿ ಇದು ಕೊಲೆಯೋ ಅಥವಾ ಅವಳಾಗಿಯೇ ನೀರಿಗೆ ಬಿದ್ದಳಾ ಅನ್ನೋದನ್ನು ಪತ್ತೆ ಹಚ್ಚಲು ಪೋಲೀಸರಿಗೆ ಕಷ್ಟವಾಗಿದ್ದು ಮಹಿಳೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆಯೋ ಆಕಸ್ಮಿಕ ಸಾವ ಅನ್ನೋದು ಗೊತ್ತಾಗಲಿದೆ.

ಈಗ ಮಹಿಳೆಯ ಕುಟುಂಬಸ್ಥರು ಗ್ರಾಮದ ಓರ್ವ ಯುವಕನ ಮೇಲೆ ಸಂಶಯ ವ್ಯಕ್ತಪಡಿಸಿದ್ದು ಅವನಿಂದಲೇ ಮಂಜುಳಾ ಕೊಲೆ ನಡಿದಿರಬಹುದು ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ಉದಯ ವಾರ್ತೆ
ಕುಂದಗೋಳ.


Share to all

You May Also Like

More From Author