ಒಂದೇ ಮರಕ್ಕೆ ನೇಣು ಹಾಕಿಕೊಂಡ ಪ್ರೇಮಿಗಳು..! ಪ್ರೀತಿಗೆ ಅಡ್ಡ ಬಂದ ಜಾತಿ

Share to all

ಬಾಗಲಕೋಟೆ: ನೇಣು ಹಾಕಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದ ಹೊರ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಚಿನ್ ಭೀಮಪ್ಪ ದಳವಾಯಿ (22), ಪ್ರತಿಭಾ ಮಡಿವಾಳ (19) ಮೃತ ಪ್ರೇಮಿಗಳು. ಇಬ್ಬರು ಅಂತರ್ಜಾತಿ ಪ್ರೇಮಿಗಳಾಗಿದ್ದು, ಇಬ್ಬರು ಪ್ರೀತಿ ಮಾಡೋ ವಿಷಯ ಇತ್ತೀಚೆಗೆ ಬಹಿರಂಗ ಆಗಿತ್ತು.

ಪ್ರೇಮಿಗಳಿಗೆ ಊರಿನ ಹಿರಿಯರು ಬೈದು ಬುದ್ಧಿ ಹೇಳಿದ್ದರಂತೆ. ಆದರೆ ಇಂದು ಅನಾಹುತ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾರೆ. ಪ್ರಿಯಕರ ಸಚಿನ್​ ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಪೂಜಾರಿಯಾಗಿದ್ದನು. ಇಂದು ಪ್ರಿಯತಮೆ ಪ್ರತಿಭಾ ಮಡಿವಾಳ ಜೊತೆ ಒಂದೇ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಮಹಾಲಿಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share to all

You May Also Like

More From Author