ಉತ್ತರ-ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕಂಟಕವಾದ ಕೆಎಸ್ ಸಿಎ..ಕ್ರಿಕೆಟ್ ತರಭೇತಿ ಪಡೆದ ಕ್ರೀಡಾಪಟುಗಳಿಗೆ ಘೋರ ಅನ್ಯಾಯ..ಕ್ರಿಕೆಟ್ ನಂಬಿದ ಮಕ್ಕಳ ಭವಿಷ್ಯದ ಜೊತೆಗೆ ಹುಡುಗಾಟ ಆಡುತ್ತಿರುವ ಸಂಸ್ಥೆ.

Share to all

ಉತ್ತರ-ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕಂಟಕವಾದ ಕೆಎಸ್ ಸಿಎ..ಕ್ರಿಕೆಟ್ ತರಭೇತಿ ಪಡೆದ ಕ್ರೀಡಾಪಟುಗಳಿಗೆ ಘೋರ ಅನ್ಯಾಯ..ಕ್ರಿಕೆಟ್ ನಂಬಿದ ಮಕ್ಕಳ ಭವಿಷ್ಯದ ಜೊತೆಗೆ ಹುಡುಗಾಟ ಆಡುತ್ತಿರುವ ಸಂಸ್ಥೆ.

ಹುಬ್ಬಳ್ಳಿ: ಕೆಎಸ್ ಸಿಎ ಹುಬ್ಬಳ್ಳಿ ಘಟಕದಲ್ಲಿ 19 ವಯೋಮಾನದ ಕ್ರಿಕೆಟ್ ಪಟುಗಳ ಆಯ್ಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಕನ್ವಿನಿಯರ್ ನಿಖಿಲ್ ಭೂಸದ ಹಟಾವೋ ಕೆಎಸ್ ಸಿಎ ಬಚಾವೋ ಹೋರಾಟಕ್ಕೆ ವಾಣಿಜ್ಯನಗರಿ ಸಿದ್ದಗೊಂಡಂತಿದೆ.

ಕನ್ವಿನಿಯರ್ ಭೂಸದ ಅವರ ಒನ್ ಮ್ಯಾನ್ ಶೋ ಧೋರಣೆ ಹಾಗೂ ಒಣ ರಾಜಕೀಯಕ್ಕೆ ಇಡೀ ಕೆಎಸ್ ಸಿಎ ಘಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಭುಗಿಲೇಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಎಸ್ ಸಿಎ ಹುಬ್ಬಳ್ಳಿ ಘಟಕದ ಕನ್ವಿನಯರ್ ಆಗಿ ನೇಮಕಗೊಂಡ 2 ವರ್ಷಗಳ ಅವಧಿಯಲ್ಲಿ ನಿಖಿಲ್ ಭೂಸದ ಮನ್ಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರಲ್ಲದೇ, ಘಟಕದ ಯಾವೊಬ್ಬ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಗುಸುಗುಸು ಕೇಳಿ ಬರುತ್ತಿದೆ.

ಐದು ಜಿಲ್ಲೆಗಳನ್ನೊಳಗೊಂಡ ಅಕಾಡೆಮಿ 18 ವರ್ಷದಿಂದ ಒಂದೇ ಕುಟುಂಬದ ಹಿಡಿತದಲ್ಲಿದೆ.ಬಾಬಾ ಬೂಸದ ಕೆಲವು ವರ್ಷ ಅಕಾಡೆಮಿ ಹಿಡಿತದಲ್ಲಿ ಇಟ್ಟುಕೊಂಡಿದ್ದರೆ.ಈಗ ಅವರ ಮಗ ನಿಖೀಲ ಭೂಸದ ಆಳುತ್ತಿದ್ದಾರೆ.

ಕೆಎಸ್ ಸಿಎ ಈ ಮೊದಲು ಪಂದ್ಯಾವಳಿ ಸಮಿತಿ,ಆಯ್ಕೆ ಸಮಿತಿ ಅನೇಕ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುವ ಅಕಾಡೆಮಿ ಕ್ರೀಡಾಪಟುಗಳ ಭವಿಷ್ಯಕ್ಕೆ ಮುಂದಾಗುತ್ತಿತ್ತು.ಆದರೆ ನಿಖೀಲ್ ಭೂಷದ ಅದ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಇಂತಹ ಅನೇಕ ಸಮಿತಿಗಳನ್ನು ವಿಸರ್ಜಿಸುವ ಮೂಲಕ ಅಧಿಕಾರದ ಧರ್ಪ ಮೆರೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಡೀ ಕೆಎಸ್ ಸಿಎಯಲ್ಲಿ ಒನ್ ಮ್ಯಾನ್ ಶೋ ತರಹ ವರ್ತಿಸುತ್ತಿದ್ದಾರೆ ಎಂದು ಅವರ ಕಾರ್ಯಾಕಾರಿ ಸಮಿತಿ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಮಸ್ತ ಉತ್ತರ ಕರ್ನಾಟಕದ ಭವಿಷ್ಯದ ಕ್ರಿಕೆಟ್ ಕಲಿಗಳಿಗೆ ವೇದಿಕೆಯಾಗಬೇಕಿದ್ದ ಈ ಸಂಸ್ಥೆ ಭೂಸದ ಅವರ ಸ್ವಪ್ರತಿಷ್ಠೆಗೆ ಸೊರಗುತ್ತಿರುವುದು ನಿಜಕ್ಕೂ ವಿಷಾಧನೀಯ.ಈಗಲಾದರೂ ಕೆಎಸ್ ಸಿಎಯಲ್ಲಿ ನಡೆದಿರುವ ಈ ಅದ್ವಾನಗಳನ್ನು ಹೋಗಲಾಡಿಸುವ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಸಂಭಂದಪಟ್ಟವರು ಗಮನಹರಿಸತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author