ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟ್.ಅಪಾರ ಪ್ರಮಾಣದ ನೀರು ಹೊರಕ್ಕೆ ನದಿ ಪಾತ್ರದ ಜನರಿಗೆ ಆತಂಕ.

Share to all

ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟ್.ಅಪಾರ ಪ್ರಮಾಣದ ನೀರು ಹೊರಕ್ಕೆ ನದಿ ಪಾತ್ರದ ಜನರಿಗೆ ಆತಂಕ.

ವಿಜಯನಗರ:-ತುಂಗಭದ್ರಾ ಡ್ಯಾಂನ 19 ನೇ ಗೇಟ್‌ ನ ಚೈನ್ ಲಿಂಕ್ ಕಟ್ಟಾದ ಪರಿಣಾಮ ಭಾರೀ ಪ್ರಮಾಣದ ನೀರು ನದಿ ಸೇರುತ್ತಿದೆ.ಇದರಿಂದ ನದಿ ಪಾತ್ರದ ಜನರಿಗೆ ಆತಂಕ ಸುರುವಾಗಿದೆ.

ಡ್ಯಾಂನ 70 ವರ್ಷದ ಇತಿಹಾಸದಲ್ಲಿ ಗೇಟ್ ಮುರಿದು ಆತಂಕ ಸೃಷ್ಟಿಯಾಗಿರುವುದು ಇದು ಎರಡನೇ ಬಾರಿ.2019 ರಲ್ಲೂ ಇಂತಹದೇ ಘಟನೆ ಸಂಭವಿಸಿ ಮುನಿರಾಬಾದ್ ಗ್ರಾಮಕ್ಕೆ ನೀರು ನುಗ್ಗಿತ್ತು.ಈಗಲೂ ಇಂತಹದೇ ಆತಂಕ ಸೃಷ್ಟಿಯಾಗಿದೆ.

ಈಗ ಮುರಿದ 19 ನೇ ಗೇಟನ ಮೂಲಕ ಭಾರೀ ಪ್ರಮಾಣದ ಅಂದರೆ 35 ಸಾವಿರ ಕ್ಯೂಸೆಕ್ಷ್ ನೀರು ನದಿಗೆ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಎಚ್ಚರಿಕೆ ನೀಡಲಾಗಿದೆ.

ಈ ಬಾರೀ ಮಳೆ ಜಾಸ್ತಿಯಾಗಿ ರುವುದರಿಂದ ಗೇಟ್ ನ ದುರಸ್ಥಿ ಕಷ್ಟವಾಗಿದೆಯಾದರೂ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದ್ದು ದುರಸ್ತಿ ಬಗ್ಗೆ ಡ್ಯಾಂನ ಪ್ಲ್ಯಾನ್ ನೋಡಲಾಗುತ್ತಿದೆ.

ಉದಯ ವಾರ್ತೆ
ವಿಜಯನಗರ.


Share to all

You May Also Like

More From Author