ಚಿತ್ರದುರ್ಗ:- ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 38 ವರ್ಷದ ಮಂಜುನಾಥ ಮೃತರು. ಕಳೆದ ಎರಡು ವರ್ಷಗಳ ಹಿಂದೆ ಚೇತನ ಜೊತೆ ಮಂಜುನಾಥ್ ವಿವಾಹ ವಾಗಿದ್ದ.
ಕೌಟುಂಬಿಕ ಕಲಹದ ಹಿನ್ನಲೆ ಪತಿಗೆ ಚೇತನ ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ಚೇತನಾ ವಿರುದ್ದ ಮಂಜುನಾಥ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ಪತ್ನಿ ಚೇತನ ದೂರು ಕೊಟ್ಟಿದ್ದರು.
ಇದರಿಂದ ಮನನೊಂದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಜುನಾಥ್ ಜಿಲ್ಲಾಸ್ಪತ್ರೆ CT ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೀಗ ಕೌಟುಂಬಿಕ ಕಲಹದ ಹಿನ್ನಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.