ಇಲ್ಲಿ ಕೇಳಿ ಜನರೇ ನೀವು ಹಿಂದೆಂದೂ ನೋಡದ ಹಾವಿದು: ಕಲ್ಪತರ ನಾಡಲ್ಲಿ ಅತ್ಯಂತ ವಿಷಕಾರಿ ಹಾವು ಪತ್ತೆ!

Share to all

ನೀವು ಈ ಹಿಂದೆ ಎಂದೆಂದೂ  ನೋಡಿರದ ಹಾವು ಕಲ್ಪತರ ನಾಡಿನಲ್ಲಿ ಪತ್ತೆಯಾಗಿದೆ. ಹೌದು ಮರ್ರೆ, ದಖ್ಖನ್ ಪ್ರಸ್ಥಭೂಮಿಯ ಒಣ ಎಲೆ ಉದುರುವ ಕಾಡು ಹಾಗೂ ತೇವಾಂಶ ಇರುವ ಕಾಡುಗಳಲ್ಲಿ ಮಾತ್ರ ಕಂಡು ಬರುವ ಈ ವಿಷಕಾರಿ ಹಾವು ಇದೀಗ ತುಮಕೂರಿನಲ್ಲಿ ಪತ್ತೆಯಾಗಿದೆ.ಇದು ಜಗತ್ತಿನ ಅತೀ ಸಣ್ಣ ವಿಷಕಾರಿ ಹಾವು ಎನ್ನಲಾಗಿದೆ. ಭಾರತದ 60 ಪ್ರಭೇದಗಳಲ್ಲಿ ವಿಷಯುಕ್ತ ಹವಳದ ಹಾವು ಇದಾಗಿದೆ. ತುಮಕೂರು ಜಿಲ್ಲೆ ಶಿರಾದ ಬುಕ್ಕಾಪಟ್ಟಣ ವನ್ಯ ಜೀವಿ ಧಾಮದಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡಿದೆ. ವನ್ಯಜೀವಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಹಾಗೂ ತಂಡ ಹವಳದ ಹಾವನ್ನು ಪತ್ತೆ ಮಾಡಿದ್ದಾರೆ

ಈ ಹಾವು ಸುಮಾರು 30 ರಿಂದ 40 ಸೆ.ಮೀ. ವರೆಗೆ ಬೆಳೆಯುವ ಸಾಮರ್ಥ್ಯ ಇದ್ದು, ದೇಹ ತಲೆಯಿಂದ ಬಾಲದ ವರೆಗೆ ತೆಳಗ್ಗೆ ಸಿಲಿಂಡರ್ ಆಕಾರದಲ್ಲಿ ಏಕರೂಪವಾಗಿತ್ತದೆ.ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣ ಹಾಗೂ ಸಣ್ಣ ಕಣ್ಣುಗಳನ್ನು ಒಳಗೊಂಡಿರುತ್ತದೆ. ಬಾಲದ ತುದಿ ಮೊಂಡಾಗಿದ್ದು ಎರಡು ಕಪ್ಪು ಬಣ್ಣದ ಗೆರೆಗಳನ್ನು ಹೊಂದಿದೆ. ದಖ್ಖನ್ ಪ್ರಸ್ಥಭೂಮಿಯ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಾಣಿಸುವ ಅಪರೂಪದ ಹಾವು ಇದಾಗಿದೆ.


Share to all

You May Also Like

More From Author