ಊಟ ಮುಗಿಸಿ ಹೊರ ಬರ್ತಿದ್ದಂತೆ ಅಟ್ಟಾಡಿಸಿ ರೌಡಿಶೀಟರ್ ಸಮೀರ್ ಮರ್ಡರ್..!

Share to all

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಕೆ. ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದಾತ. ರೌಡಿ ಶೀಟರ್ ಸಮೀರ್ ಹೋಟೆಲ್​ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಊಟ ಮುಗಿಸಿ ಹೋಟೆಲ್​​ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್​ ಸಮೀರ್​​ನನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕಡಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ಕೊಲೆಯಾಗಿರುವ ರೌಡಿಶೀಟರ್ ಸಮೀರ್​​ ಟಾರ್ಗೆಟ್ ಇಲಿಯಾಸ್ ಹತ್ಯೆ ಕೇಸ್​ನ ಆರೋಪಿಯಾಗಿದ್ದ. ಮಂಗಳೂರು ಕಾರಾಗೃಹದಲ್ಲಿರುವಾಗಲೂ ಸಹ ಕೈದಿಗಳು ಈತನ ಮೇಲೆ ದಾಳಿ ಮಾಡಿದ್ದರು. ಇದಾದ ಮೇಲೆ ವಾರದ ಹಿಂದೆಯಷ್ಟೇ ಜಾಮೀನಿನ ​ಮೇಲೆ ರೌಡಿ ಶೀಟರ್ ಸಮೀರ್ ಜೈಲಿನಿಂದ ಹೊರ ಬಂದಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

 


Share to all

You May Also Like

More From Author