ಮೊಬೈಲ್ ನಲ್ಲಿಯೇ ಗಾಂಜಾ ಮಾರಾಟ.ಜ್ಯೆಲು ದಾರಿ ತೋರಿಸಿದ ಧಾರವಾಡ ಪೋಲೀಸರು.
ಧಾರವಾಡ –
ವಿದ್ಯಾ ಕಾಶಿ ಧಾರವಾಡದಲ್ಲಿ ಮೋಬ್ಯೆಲ್ ಮೂಲಕವೇ ಗಾಂಜಾ ಗುಂಗು ಹಿಡಿಸಿದ್ದ ಯುವಕನೊಬ್ಬನನ್ನು ಧಾರವಾಡ ಉಪನಗರ ಪೊಲೀಸರು ಹೆಡಮುರಿ ಕಟ್ಟಿದ್ದಾರೆ.. ನಗರದಲ್ಲಿ ಪೋನ್ ಮೂಲಕವೇ ಗಾಂಜಾ ತರಿಸಿ ಪೋನ್ ಮೂಲಕನೇ ಸಪ್ಲೈ ಮಾಡುತ್ತಿದ್ದ ಪೆಡ್ಲರ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.ಖಚಿತವಾದ ಮಾಹಿತಿಯನ್ನು ಪಡೆದುಕೊಂಡು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಎಸಿಪಿ ಪ್ರಶಾಂತ್ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಉಪನಗರ ಪೊಲೀಸರು ಗಾಂಜಾ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ.ಬೇರೆ ಕಡೆಗಳಿಂದ ಸದ್ದಿಲ್ಲದೇ ಗಾಂಜಾವನ್ನು ತಗೆದುಕೊಂಡು ಧಾರವಾಡದಲ್ಲಿ ಮೊಬೈಲ್ ಲಿಂಕ್ ಮೂಲಕ ಮಾರಾಟ ಮಾಡುತ್ತಿದ್ದ ಸಾಗರ ಎಂಬ ಯುವಕ, ಸಣ್ಣ ವಯಸ್ಸಿನಲ್ಲಿ ಮೊಬೈಲ್ ನಲ್ಲಿಯೇ ಲಿಂಕ್ ಮೂಲಕ ಮಾರಾಟ ಮಾಡುತ್ತಿದ್ದ ಈ ಒಂದು ಮಾಹಿತಿಯನ್ನು ಪಡೆದುಕೊಂಡು ಭರ್ಜರಿ ಕಾರ್ಯಾಚರಣೆ ಮಾಡಿ ಬಂಧನ ಮಾಡಿದ್ದಾರೆ.ಕಾಲೇಜು ವಿದ್ಯಾರ್ಥಿಗಳಿಗೆ,ಇಂಜನಿಯರ್ ಗಳಿಗೆ ಸೇರಿದಂತೆ ಬೇರೆ ಬೇರೆ ಯವರಿಗೆ ಸಪ್ಲೈ ಮಾಡುತ್ತಿದ್ದನಂತೆ ಈ ಸಾಗರ್,ಬಂಧಿತನಿಂದ
840 ಗ್ರಾಂ ಗಾಂಜಾವನ್ನು ಹಾಗೇ ಪ್ಯಾಕಿಂಗ್ ಪೇಪರ್ ಇದರೊಂದಿಗೆ ಪ್ಯಾಕೇಟ್ ಗಳನ್ನು ತೂಕದ ಯಂತ್ರಗಳನ್ನು ಉಪನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾಗರ ನಗರದ ಮದಾರಮಡ್ಡಿಯ ನಿವಾಸಿಯಾಗಿದ್ದು 22ನೇ ವಯಸ್ಸಿನಲ್ಲಿಯೇ ಈ ಒಂದು ದಂಧೆಯಲ್ಲಿ ತೊಡಗಿದ್ದವನಿಗೆ ಉಪನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಈ ಒಂದು ಕಾರ್ಯಾಚರಣೆಯಲ್ಲಿ ಇನಸ್ಪೇಕ್ಟರ್ ದಯಾನಂದ ಶೇಗುಣಸಿ,ಪಿಎಸ್ಐ ಸಚಿನ ದಾಸರಡ್ಡಿ,ಲಕ್ಷ್ಮೀ ಕೋಡಬಾಳ,ಸಿಬ್ಬಂದಿಗಳಾದ ಪ್ರದೀಪ ಕುಂದಗೋಳ,ಮೆಹಬೂಬ ನದಾಫ್,ರವಿ ದೊಡಮನಿ,ಶಿವು ದೊಡಮನಿ,ಭರತ್ ದೇವಪ್ಪಗೊಳ,ಮಂಜು ಅಸುಂಡಿ,ಅದೃಶ್ಯ ಕಲಭಾವಿ, ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಇತ್ತೀಚಿಗಷ್ಟೇ ನಗರಕ್ಕೆ ಗೃಹ ಸಚಿವರು ಭೇಟಿ ನೀಡಿದ ಬೆನ್ನಲ್ಲೇ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರ ಖಡಕ್ ಸೂಚನೆಯಿಂದಾಗಿ ಅವಳಿ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಮುಕ್ತ ಮಾಡಲು ಕರೆ ನೀಡಿದ್ದಾರೆ ಹೀಗಾಗಿ ಪೊಲೀಸರು ಗಾಂಜಾ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಪಣ ತೋಟ್ಟಿದ್ದಾರೆ.
ಉದಯ ವಾರ್ತೆ ಧಾರವಾಡ