ಉತ್ತರಪ್ರದೇಶ: ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಆಮಿಷ ಒಡ್ಡಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದಾಗ 70 ವರ್ಷದ ಧರ್ಮಗುರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಮಕ್ಬರಾದಲ್ಲಿ ನಡೆದಿದೆ. ವಿಷಯ ತಿಳಿದ ಜನರು ಬಾಲಕಿಯನ್ನು ಆತನಿಂದ ರಕ್ಷಿಸಿದ್ದಾರೆ.
ಆರೋಪಿ ಮೌಲಾನಾ ಮುಖ್ತಾರ್ ಎಂಬಾತ ಹಲವು ವರ್ಷಗಳಿಂದ ಧರ್ಮಗುರುವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗಷ್ಟೇ ನೆರೆಮನೆಯ ಏಳು ವರ್ಷದ ಮುಗ್ಧ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಮಾನವೀಯ ಕೃತ್ಯಕ್ಕೆ ಯತ್ನಿಸಿದ್ದಾನೆ. ಧರ್ಮಗುರುವಿನೊಂದಿಗೆ ಬಾಲಕಿ ಮನೆಗೆ ಹೋಗುವುದನ್ನು ಸ್ಥಳೀಯರೊಬ್ಬರು ನೋಡಿದ್ದು, ಅನುಮಾನ ಬಂದು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಬಳಿಕ ಅವನು ಕಿಟಕಿಯಿಂದ ಒಳಗಿನ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿ ಆರೋಪಿಯ ಕೊಳಕು ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಸ್ಥಳೀಯ ಜನರನ್ನು ಕರೆಸಿ ಆತನ ಹೀನಾ ಕೃತ್ಯವನ್ನು ಬಯಲಿಗೆಳೆದಿದ್ದಾನೆ. ಸ್ಥಳೀಯರು ಆತನನ್ನು ಬೆತ್ತಲೆ ಸ್ಥಿತಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಮನಬಂದಂತೆ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ