ಲವ್ ಬ್ರೇಕಪ್: ಮನನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ!

Share to all

ನೆಲಮಂಗಲ:- ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಪ್ರೇಮ ವೈಫಲ್ಯಕ್ಕೆ ಮನನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. 24 ವರ್ಷದ ಲಿಖಿತ ಜಾಸ್ಮೀನ್ ಮೃತ ದುರ್ದೈವಿ. 10 ದಿನಗಳ ಹಿಂದೆ ತನ್ನ ಅಕ್ಕ ಕೃತಿಕ ಜಾಸ್ಮೀನ್ ಮನೆಗೆ ಬಂದಿದ್ದ ಯುವತಿ ಇಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲಿಖಿತ ಜಾಸ್ಮೀನ್ ಬಿಹಾರಿ ಮೂಲದ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರ ಪ್ರೇಮ ಚನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗಾಗಿ ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ಲಿಖಿತ ಜಾಸ್ಮೀನ್ ಮನನೊಂದಿದ್ದಳು. ಸಾಯುವ ಮಾತಗಳನ್ನಾಡುತ್ತಿದ್ದಳು. ತಂಗಿ ಒಬ್ಬಳೇ ಇದ್ದರೆ ಏನಾದ್ರು ಮಾಡಿಕೊಳ್ಳುತ್ತಾಳೆಂದು ಭಯಪಟ್ಟು ಲಿಖಿತ ಅಕ್ಕ ಕೃತಿಕ ತಂಗಿಯ ನೋವು ಮರೆಸುವ ಸಲುವಾಗಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದ ಲಿಖಿತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


Share to all

You May Also Like

More From Author