ಬಾಳೆ ಎಲೆಗಳನ್ನು ಕೆಲವು ಆಯುರ್ವೇದ ಔಷಧಿಗಗಳಿಗೆ ಬಳಸಲಾಗುತ್ತದೆ. ಹಾಗಾಗಿ ಇದರಲ್ಲಿ ಊಟ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳಿಸುತ್ತದೆ. ಬಾಳೆ ಎಲೆ ತಿಂದರೆ ಕೂದಲು ಉದ್ದವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೇ ಹೊಳೆಯುವ ತ್ವಚೆಗೂ ಇದು ಒಳ್ಳೆಯದು. ಆಯುರ್ವೇದದ ಪ್ರಕಾರ, ಬಾಳೆ ಎಲೆಗಳಲ್ಲಿ ಊಟ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದೆ.
ಬಾಳೆ ಎಲೆ ಬಳಸುವ ಇತರ ಲಾಭಗಳು
- ಬಾಳೆ ಎಲೆಯಲ್ಲಿ ಊಟ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.
- ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳಿಂದ ಮಾಡಿದಂತಹ ಪ್ಲೇಟ್ ಗಳು ತುಂಬಾ ದುಬಾರಿ. ಇದು ಪರಿಸರಕ್ಕೂ ಒಳ್ಳೆಯದಲ್ಲ.
- ಸ್ಟೆರಿಫೋಮ್ ಪ್ಲೇಟ್ ಗಳನ್ನು ಮರುಬಳಕೆ ಮಾಡಬಹುದು. ಆದರೆ ಇದು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಹಾಗೆ ನೂರಾರು ವರ್ಷಗಳ ಕಾಲ ಉಳಿಯಬಹುದು. ಬಾಳೆಎಲೆಯು ಮಣ್ಣಿನಲ್ಲಿ ಬೇಗನೆ ಕರಗುವುದು.
- ನಗರ ಪ್ರದೇಶ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಾಳೆ ಎಲೆಯು ಲಭ್ಯವಿದೆ. ಇದು ಹೆಚ್ಚು ದುಬಾರಿ ಕೂಡ ಆಗಿರಲ್ಲ.
- ಪ್ಲೇಟ್ ಗಳನ್ನು ದ್ವೇಷಿಸುತ್ತಿದ್ದರೆ ಆಗ ನೀವು ಬಾಳೆ ಎಲೆ ಬಳಕೆ ಮಾಡಿ. ಇದನ್ನು ಬಳಸಿದ ಬಳಿಕ ಬಿಸಾಕಬಹುದು. ಪ್ಲೇಟ್ ನಂತೆ ನಿಮಗೆ ಅದನ್ನು ಶುಚಿ ಮಾಡಬೇಕಾಗಿಲ್ಲ.
- ಬಾಳೆ ಎಲೆಯಲ್ಲಿ ಇರುವಂತಹ ನೈಸರ್ಗಿಕ ಮೇಣವು ಇದನ್ನು ವಾಟರ್ ಪ್ರೂಫ್ ಆಗಿ ಮಾಡಿ. ಇದರಿಂದಾಗಿ ಬಾಳೆ ಎಲೆಯು ತುಂಬಾ ಶುಚಿಯಾಗಿರುವುದು ಮತ್ತು ಆಹಾರಕ್ಕೆ ಒಳ್ಳೆಯ ರುಚಿ ನೀಡುವುದು.
- ಬಾಳೆ ಎಲೆಯಲ್ಲಿ ಊಟ ಬಡಿಸುವುದು ತುಂಬಾ ಸುಲಭ. ಇದನ್ನು ಒಮ್ಮೆ ನೀರಿನಲ್ಲಿ ಒರೆಸಿಕೊಂಡು ಬಳಸಬಹುದು.
- ಬಾಳೆ ಎಲೆಯಲ್ಲಿನ ಊಟವು ತುಂಬಾ ಆರೋಗ್ಯಕಾರಿ, ಶುಚಿ ಹಾಗೂ ಫೋಷಕಾಂಶಗಳನ್ನು ದೇಹಕ್ಕೆ ನೀಡುವುದು.