ನಾಯಿ ಕೊಡೆಗಳಂತೆ ತಲೆ ಎತ್ತಿದ ಸ್ಪಾಗಳು…ಸ್ಪಾಗಳಲ್ಲಿ ಅಕ್ರಮ ದಂಧೆ..ಕಾಂಗ್ರೆಸ್ ಮುಖಂಡನ ಗಂಭೀರ ಆರೋಪ..

Share to all

ನಾಯಿ ಕೊಡೆಗಳಂತೆ ತಲೆ ಎತ್ತಿದ ಸ್ಪಾಗಳು…ಸ್ಪಾಗಳಲ್ಲಿ ಅಕ್ರಮ ದಂಧೆ..ಕಾಂಗ್ರೆಸ್ ಮುಖಂಡನ ಗಂಭೀರ ಆರೋಪ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಸ್ಪಾಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ.ಅಲ್ಲದೇ ಕೆಲವೊಂದಿಷ್ಟು ಸ್ಪಾಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಗಾಂಜಾ,ಡ್ರಗ್ಸ್,ಸೇರಿದಂತೆ ಮಾದಕ ವಸ್ತುಗಳ ಮಾರಾಟ ಜಾಲಕ್ಕೆ ಕಡಿವಾಣ ಜೊತೆಗೆ ಜೂಜಾಟ,ರೌಡಿಸಂ ಮಟ್ಟಹಾಕಿದಂತೆ ಸ್ಪಾಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ ಜನರ ಪ್ರಶಂಸೆಗೆ ಕಾರಣರಾಗಬೇಕು ಎಂದು ಕಮೀಷನರ್ ಎನ್ ಶಶಿಕುಮಾರ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

 

ಈ ಸ್ಪಾ ಮಸಾಜ್ ನಲ್ಲಿ ನಡೆಯುತ್ತಿರುವ ಆಕ್ರಮ ಚಟುವಟಿಕೆ ನಿಯಂತ್ರಿಸಲು ಮಹಾನಗರ ಪಾಲಿಕೆ ಮತ್ತು ಪೋಲೀಸರು ವಿಫಲರಾಗಿದ್ದಾರೆ ಎಂದು ರಜತ್ ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author