ನೀರಿನ ನಲ್ಲಿ ಮುರಿದವನಿಗೆ ಬಿತ್ತು ಚಪ್ಪಲಿ ಏಟು.ಚಪ್ಪಲಿ ಸೇವೆಯ ವಿಡಿಯೋ ವ್ಯೆರಲ್.
ಕೆಂಬಾವಿ:-ಯಾದಗಿರಿ ಜಿಲ್ಲೆಯ ಕೆಂಬಾವಿಯ ಮುಲ್ಲಾ (ಬಿ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಾಶಪಡಿಸಿ ಅದರ ನಲ್ಲಿಯನ್ನು ಮುರಿದು ಹಾಕಿದ್ದಾನೆ ಎಂದು ಆರೋಪಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಆತನಿಗೆ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು,ಮತ್ತೊಬ್ಬನ ಕ್ಯೆ ತಿರವಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯೆರಲ್ ಆಗಿದೆ.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪಿಡಿಓ ಮತ್ತು ಯುವಕನ ಮದ್ಯೆ ಮಾತಿಗೆ ಮಾತು ಬೆಳೆದ ಚಪ್ಪಲಿಯಿಂದ ಹೊಡೆದಾಡುವ ಹಂತಕ್ಕೆ ಹೋಗಿದೆ.ಇದನ್ನ ಗಮನಿಸಿದ ಗ್ರಾಮಸ್ಥರು ಪಿಡಿಓ ಮೇಲೆ ಕ್ರಮಕ್ಯೆಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಉದಯ ವಾರ್ತೆ ಯಾದಗಿರಿ