ಚಪ್ಪಲಿ ಧರಸಿಕೊಂಡು ಧ್ವಜಾರೋಹಣ ನೆರವೇರಿಸಿದ ನಮ್ಮೂರಿನ ಜನಸೇವಕ.ಜನನಾಯಕರೇ ಇದೇನಾ ನೀವು ದೇಶಕ್ಕೆ ಕೊಡುವ ಗೌರವ.
ನವಲಗುಂದ : ಪಟ್ಟಣದ ಕಾಂಗ್ರೆಸ್ ಕಚೇರಿ ಧ್ವಜಾರೋಹಣವನ್ನು ಶಾಸಕ ಎನ್ ಎಚ್ ಕೋನರಡ್ಡಿ ಚಪ್ಪಲಿ ಧರಿಸಿಕೊಂಡು ಧ್ವಜಾರೋಹಣ ನೆರವೇರಿಸಿ ಅಗೌರವ ತೋರಿಸಿದ ಘಟನೆ ಇಂದು ಜರುಗಿದೆ.
ದೇಶದ ಬಗ್ಗೆ ಉದ್ದ ಉದ್ದ ಭಾಷಣ ಬಿಗಿಯುವ ಜನಸೇವಕರೇ ಧ್ವಜಾರೋಹಣ ಮಾಡುವಾಗ ಕನಿಷ್ಠ ಚಪ್ಪಲಿ ಬಿಟ್ಟು ಮಾಡಬೇಕು ಅನ್ನೋ ಸಾಮಾನ್ಯ ಜ್ಞಾನವಾದರೂ ಇಲ್ಲಾ ಅಂದರೆ ಹೆಂಗೆ ಶಾಸಕರೇ.
ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ,ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡ್ರ, ಪುರಸಭಾ ಸದಸ್ಯರಾದ ಮಂಜುನಾಥ್ ಜಾಧವ, ಶಿವಾನಂದ ತಡಸಿ, ಅಪ್ಪಣ್ಣ ಹಳ್ಳದ, ಮೋದಿನಸಾಬ್ ಶಿರೂರು ಹಾಗೂ ನಾಮನಿರ್ದೇಶಿತ ಸದಸ್ಯರು ಕಾಂಗ್ರೆಸ್ ಪದಾಧಿಕಾರಿಗಳು ಇತರರು ಇದ್ದರು.