ಬೆಂಗಳೂರು: ವರ ಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮಿಯನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಇನ್ಸ್ಟಾಗ್ರಾಂ , ಫೇಸ್ ಬುಕ್ ಶೇರ್ ಮಾಡುವ ಮುನ್ನ ಎಚ್ಚರವಾಗಿರಬೇಕು ಯಾಕಂದ್ರೆ ರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಹದೇವಪುರ ಪೊಲೀಸರು ಯಶಸ್ವಿಯಾಘಿದ್ದಾರೆ. ಆರೋಪಿಗಳಿಂದ 75 ಲಕ್ಷ ಮೌಲ್ಯದ 840 ಗ್ರಾ ಚಿನ್ನ, ಬೆಳ್ಳಿ ವಸ್ತುಗಳು ಜಪ್ತಿ ಮಾಡಲಾಗಿದೆ.
ಜ್ಞಾನ ಪ್ರಕಾಶ್. ಪ್ರೇಮ್ ಕುಮಾರ್ ಶಿವಕುಮಾರ್ ಸಂತೋಷ ಬಂಧಿತ ಆರೋಪಿಗಳಾಗಿದ್ದು, ಮಹಾದೇವಪುರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಿರಾತಕ ಗ್ಯಾಂಗ್ ಕಳ್ಳತನ ಮಾಡಿತ್ತು. ಒಂದೇ ಬಾರಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಮನೆಗಳನ್ನು ಕಳ್ಳತನ ಮಾಡಿದ್ದರು. ಅದು ಬೇರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಎಂದು ಮಾಲೀಕರು ಮನೆಯಲ್ಲಿಟ್ಟಿದ್ದ ವರಮಹಾಲಕ್ಷ್ಮಿಯ ಬೆಳ್ಳಿ ಮುಖವಾಡ, ಮನೆ ಮುಂದೆ ಚಪ್ಪಲಿ ಇಲ್ಲದೆ ಇರುವ ಮನೆಗಳು, ಲೇಟ್ ಆಫ್ ಆದ ಮನೆ, ಮನೆ ಮುಂದೆ ನ್ಯೂಸ್ ಪೇಪರ್ ಬಿದ್ದಿರುವ ಮನೆಗಳು ಟಾರ್ಗೆಟ್ ಮಾಡುತ್ತಿದ್ದರು.
ಚಿನ್ನಾಭರಣಗಳನ್ನು ಕದ್ದಿದ್ದರು. ಪೊಲೀಸರು ವಶಕ್ಕೆ ಪಡೆದುಕೊಂಡ ಚಿನ್ನಾಭರಣಗಳನ್ನು ಹಬ್ಬದ ದಿನದಂದೇ ಮಾಲೀಕರಿಗೆ ತಲುಪಿಸಿದ್ದಾರೆ. ಆರೋಪಿಗಳ ಬಂಧನದಿಂದ 18 ಮನೆಗಳ್ಳತನದ ಪ್ರಕರಣಗಳು ಬೆಳಕಿಗೆ ಬಂಧಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.