ಭಾರತ /ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಕೋರರ ಮೇಲೆ ಪೋಲೀಸರ ದಾಳಿ.19 ಜನರ ಬಂಧನ.
ಹುಬ್ಬಳ್ಳಿ
ನಿನ್ನೆ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ಹ್ಯೆವೋಲ್ಟೇಜ್ ವಿಶ್ವಕಪ್ ಒಂದು ಕಡೆ ನಡೆಯುತ್ತಿದ್ದರೆ.ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕೂಡಾ ಜೋರಾಗಿ ನಡೆದಿದೆ ಅನ್ನುವ ಮಾಹಿತಿ ಆಧರಿಸಿ ಪೋಲೀಸ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಪೋಲೀಸರು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ದಾಳಿ ನಡೆಸಿ 8 ಪ್ರಕರಣಗಳನ್ನು ದಾಖಲಿಸಿ. 19 ಜನ ದಂಧೆ ಕೋರರನ್ನು ಹೆಡಮುರಿ ಕಟ್ಟಿದ್ದಾರೆ.
ಧಾರವಾಡ ಶಹರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಎರಡು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಿಸಿ 4 ಜನರನ್ನ ಬಂಧಿಸಿದ್ದಾರೆ.
ಹುಬ್ಬಳ್ಳಿಯ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ನಾಲ್ಕು ಜನರ ಬಂಧನ.ಹಳೇಹುಬ್ಬಳ್ಳಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರಕರಣ ಆರು ಜನರ ಬಂಧನ.
ಕಮರೀಪೇಟೆ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ಹಾಗೂ ಇಬ್ಬರ ಬಂಧನ.ಹಾಗೂ ಕೇಶ್ವಾಪುರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಹಾಗೂ ಐದು ಜನರನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿ ದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ