ಬೆಂಗಳೂರು:- ವೀಕ್ಷಕರೇ ನೋಡಿ ಇಲ್ಲೊಬ್ಬ ವೃದ್ಧ ಇವತ್ತೋ, ನಾಳೆನೋ ಸಾಯೋ ಹಾಗೆ ಇದ್ದಾನೆ. ಅಂತಹ ಮುದುಕ ಮಕ್ಕಳು, ಮೊಮ್ಮಕ್ಕಳ ಸಮಾನದಲ್ಲಿ ಇರುವವರು ಸಮೀಪದಲ್ಲೇ ಕೂತು ಕೆಟ್ಟದಾಗಿ ವರ್ತಿಸಿದ್ದಾನೆ. ಅದು ಎಲ್ಲಿ ಗೊತ್ತಾ!? ಪಬ್ಲಿಕ್ ಪ್ಲೇಸ್ ನಲ್ಲಿ. ಹುಡುಗಿಯರೇ ಇರೋ ಕಡೆ ಹೋಗೋದು ಕೆಟ್ಟದಾಗಿ ಮಾಡೋದು ಇವನ ಛಾಳಿ ಆಗ್ಬಿಟ್ಟಿದೆ.
ಎಸ್, ಬೆಂಗಳೂರಿನ ವಿಡಿಯೋ ಒಂದು ವೈರಲ್ ಆಗಿದೆ. ಕಬ್ಬನ್ ಪಾರ್ಕ್ ನಲ್ಲಿ ಹಸ್ತಮೈಥುನ ಮಾಡ್ತಿದ್ದ ವೃದ್ಧನನ್ನು ಮಹಿಳೆಯೊಬ್ಬರು ಹಿಂಬಾಲಿಸುತ್ತಿದ್ದಾರೆ. ಹುಡುಗಿ ಹತ್ತಿರ ಬರ್ತಿರೋದನ್ನು ನೋಡಿದ ವೃದ್ಧ ಅಲ್ಲಿಂದ ಹೋಗ್ತಿದ್ದಾನೆ.
ಇನ್ನೂ ಈ ಮುದುಕ ಕಬ್ಬನ್ ಪಾರ್ಕ್ ನಲ್ಲಿ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕೆ ಬಂದು ಹಸ್ತಮೈಥುನ ಮಾಡ್ತಾನೆ. ಅನೇಕ ಮಹಿಳೆಯರು ಆರೋಪ ಮಾಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ. ಏನು ಮಾಡ್ತಿದ್ದೀ ಎಂದು ಮಹಿಳೆ ಆತನನ್ನು ಪ್ರಶ್ನೆ ಮಾಡ್ತಿದ್ದಾರೆ. ಅದಕ್ಕೆ ಆತ ಏನು ಎನ್ನುತ್ತಾನೆ. ಸೆಕ್ಯುರಿಟಿ ಕರೆಯಬೇಕಾ ಎಂದು ಮಹಿಳೆ ಕೇಳ್ತಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.
ವಿಡಿಯೋ ವೈರಲ್ ಆಗ್ತಿದ್ದಂತೆ ಅದಕ್ಕೆ ಬೆಂಗಳೂರು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಕ್ರಮತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.