ಗಬ್ಬೂರ ಸೋಮನಗೌಡ ಕೊಲೆ ಪ್ರಕರಣದ ಹಿಂದಿನ ನಡೆದದ್ದೇನು?ಪೋಲೀಸರಿಗೆ ಗೊತ್ತಿದ್ದರೂ……..
ಹುಬ್ಬಳ್ಳಿ.
ಹುಬ್ಬಳ್ಳಿಯ ಗಬ್ಬೂರಿನ ಸೋಮನಗೌಡನಿಗೆ ಚಾಕು ಹಾಕಿದ್ದು ಮಂಗಳವಾರ ರಾತ್ರಿ.ಅವನು ಚಿಕಿತ್ಸೆ ಫಲಕಾರಿಯಾಗದೇ ಸಾವಮ್ನಪ್ಪಿದ್ದು ಬುಧವಾರ ಬೆಳಿಗ್ಗೆ.
ಆದರೆ ಮಂಗಳವಾರ ಚಾಕು ಇರಿತ ಆಗುವ ಹಿಂದಿನ ದಿನ ಅಂದರೆ ಮಂಗಳವಾರ ಇಡೀ ದಿನ ಗಬ್ಬೂರಿನಲ್ಲಿ ನಡೆದದ್ದಾರೂ ಏನು?ಅದನ್ನ ಉದಯ ವಾರ್ತೆ ಎಳೆ ಎಳೆಯಾಗಿ…ಬಿಚ್ಚಡುತ್ತದೆ ನೋಡಿ.. ಮಂಗಳವಾರ ಬೆಳಿಗ್ಗೆ ಬೆಂಕಿ ಮಾದ್ಯಾ ತನ್ನ ಸಂಗಡಿಗರೊಂದಿಗೆ 8 ಬ್ಯೆಕ್ ಗಳಲ್ಲಿ ಹತ್ತಕ್ಕೂ ಹೆಚ್ಚು ಜನರು ಅಣ್ಣೀಗೇರಿ ಪಟ್ಟಣಕ್ಕೆ ಹೋಗಿ ಬೆಂಕಿ ಮಾದ್ಯಾನ ಪತ್ನಿಯ ಸಹೋದರನೊಂದಿಗೆ ಜಗಳ ತೆಗೆದು ಅವನನ್ನು ಹುಬ್ಬಳ್ಳಿಗೆ ಬೆಳಿಗ್ಗೆ 8-00 ಘಂಟೆಗೆ ಕರೆತಂದು ಗಬ್ಬೂರಿನ RTO ಆಪೀಸ ಬಳಿ ಬೆಂಕಿ ಮಾದ್ಯಾ ಹಾಗೂ ಅವನ ಸಂಗಡಿಗರು ಮನಬಂದಂತೆ ಥಳಿಸಿ ಮತ್ತೆ ಆ ಹುಡುಗನನ್ನು ಬ್ಯಾರಲ್ ಪ್ಯಾಕ್ಟರಿ ಕಡೆ ಕರೆದುಕೊಂಡು ಹೋಗಿ ಅಲ್ಲಿ ಮತ್ತೆ ಅವನನ್ನ ಹೊಡೆದು ಗಬ್ಬೂರ ಸರ್ಕಲ್ ಹತ್ತಿರ ಕರಕೊಂಡು ಬಂದು ಎಗ್ಗ ರೈಸ್ ತಿನ್ನಿಸಿ ಕ್ಯೆ ಬಿಡತಾರೆ.ನಂತರ ಅವನು ಅಣ್ಣೀಗೇರಿಗೆ ಹೋಗಿ ಕಿಡ್ನ್ಯಾಪ್ ಕೇಸ್ ದಾಖಲಿಸತಾನೆ..
ನಂತರ ಅಣ್ಣೀಗೇರಿ ಹುಡುಗನ್ನ ಹೊಡೆದಿದ್ದು ಮತ್ತು ಅಣ್ಣೀಗೇರಿಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗುತ್ತಿದ್ದಂತೆ ಹೊನ್ನಪ್ಪ ಕೋಗೋಡ ಬೆಂಕಿ ಮಾದ್ಯಾ ಹಾಗೂ ಮರ್ಡರ್ ಆದ ಸೋಮನಗೌಡನ ಅಣ್ಣ ಶಿವನಗೌಡನ್ನ ಮನೆಗೆ ಕರೆಯಿಸಿ ನೀವೆಲ್ಲಾ ಹೀಗೆ ಹೊಡೆದು ನನ್ನ ಹೆಸರು ಕೆಡಸತೀರಿ ಅಂತಾ ಹೊಡಿತಾನಂತೆ.ಶಿವನಗೌಡನ್ನ ಹೊಡೆದ ಸುದ್ದಿ ಸೋಮನಗೌಡನಗೆ ತಿಳಿದು ಹೊನ್ನಪ್ಪನಿಗೆ ಪೋನಿನಲ್ಲಿ ಬ್ಯೆತಾನಂತೆ.ಅವಾಗ ಹೊನ್ನಪ್ಪ ಸೋಮನಗೌಡನ್ನ ಹುಡುಕಿಕೊಂಡು ಹೋಗಿ ಹೊಡಿತಾ ಇದ್ದಂತೆ ಸೋಮನಗೌಡ ಹೆದರಿ ಅಲ್ಲಿಂದ ಪರಾರಿಯಾಗತಾನಂತೆ.ಅವಾಗ ಎಂಟ್ರಿ ಹೊಡೆದಿದ್ದು ಗೂಳಿಯಂತೆ ನುಗ್ಗಿದ ಆ ಗೂಳಿ ಸೋಮನಗೌಡನ್ನ ರಾತ್ರಿ 1-30 ರ ಸುಮಾರಿಗೆ ಕರೆಸಿ ಹೊನ್ನಪ್ಪ ಮತ್ತು ಸೋಮನಗೌಡನ್ನ ರಾಜೀ ಮಾಡುವ ನಾಟಕ ಮಾಡಿ ಹೊನ್ನಪ್ಪನ ಕಡೆಯಿಂದ ಸೋಮನಗೌಡನ ಹೊಡೆಸುವ ಪ್ಲ್ಯಾನ್ ಮಾಡಿದ್ದಾ ಎನ್ನಲಾಗಿದೆ. ಅಲ್ಲಿ ತಡ ರಾತ್ರಿ ಅಷ್ಟೊಂದು ಗದ್ದಲ ನಡೆದಾಗ ಎಂಟ್ರಿ ಹೊಡೆದಿದ್ದು .ಬೇರೊಬ್ಬರು ಇಲ್ಲಾ ಬ್ಯಾಡ ಬಿಡಿ ಸರ್ ನಾನೇ ಅವನನ್ನ ಮನೆಗೆ ಕಳಿಸ್ತೀನಿ ಅಂದಾಗ ಆಯ್ತು ನಿಮ್ಮಿಬ್ಬರ ಪೋಟೋ ತೆಗೆದುಕೊಳ್ಲತೇನಿ ಅವನಿಗೇನಾದರೂ ಆದರೆ ನೀವೇ ಜಾವಾಬ್ದಾರಿ ಅಂತಾ ಗೂಳಿಯ ಪೋಟೋ ತೆಗೆದುಕೊಂಡು ಸಾಹೇಬ್ರು ಹೋದರಂತೆ.ನಂತರ ಗೂಳಿ ಇವತ್ತು ನಾನ ಸಾಹೇಬ್ರಗೆ ಮಾತ ಕೊಟ್ಟೇನಿ ಇವತ್ತು ಏನು ಮಾಡಬೇಡಿ ಅವನ್ನ ನಾಳೆ ಏನ ಬೇಕಾದರೂ ಮಾಡಿಕೊಳ್ಳಿ ಅಂತಾ ಸೋಮನಗೌಡನ್ನ ಕರೆದುಕೊಂಡು ಹೋಗಿ ಮನಗೆ ಬಿಟ್ಟು ಬಂದನಂತೆ.ಮರುದಿನ ಹಾಕಿದರ ನೋಡ್ರಿ ಸ್ಕೆಚ್ ಕೊನೆಗೂ ಕೊಲೆಯಾಗಿಯೇ ಹೋಯ್ತು.ಅಂದು ರಾತ್ರಿ ಆಗಬೇಕಾಗಿದ್ದು ಮರು ದಿನ ಆಯ್ತು ಮರ್ಡರ್. ಬೆಂಡಿಗೇರಿಯ ಖಡಕ್ ಪಿಆಯ್ ಹಾಗೂ ಪಿಎಸ್ ಆಯ್.. RTO ಮತ್ತು ಬ್ಯಾರಲ್ ಪ್ಯಾಕ್ಟರಿಯ ಹತ್ತಿರ ಇರುವ ಸಿಸಿ ಟಿವಿ ಪುಟೇಜ್ ಚೆಕ್ ಮಾಡಿದರೆ ಮತ್ತಷ್ಟು ರೌಡಿಗಳ ಪಟ್ಟಿ ಪೋಲೀಸರಿಗೆ ಸಿಗಬಹುದು ಅನ್ನುವ ಕಳ ಕಳಿ ಉದಯ ವಾರ್ತೆದ್ದು.
ಉದಯ ವಾರ್ತೆ ಹುಬ್ಬಳ್ಳಿ