ಒಗ್ಗರಣೆಗೆ ಮಾತ್ರ ಸೀಮಿತವಲ್ಲ ಜೀರಿಗೆ: ಅನೇಕ ರೋಗಗಳಿಗೆ ರಾಮಬಾಣ ಈ ಸಣ್ಣ ಕಾಳುಗಳು!

Share to all

ಭಾರತದಲ್ಲಿ ಜೀರಿಗೆಯನ್ನು ಒಗ್ಗರಣೆ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಜ್ಜಿಗೆ, ಸಲಾಡ್, ಪಲ್ಯಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿ ಪರಿಮಳವನ್ನು ಬಿಡುಗಡೆ ಮಾಡುವವರೆಗೆ ಹುರಿಯುತ್ತಾರೆ. ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದವರೇ ಬಲ್ಲರು. ಸದಾ ಲಭ್ಯವಿರುವ ಈ ಜೀರಿಗೆಯಿಂದ ಸಣ್ಣ ಪುಟ್ಟ ಆರೋಗ್ಯ ತೊಂದರೆಗಳನ್ನು ದೂರಮಾಡಿಕೊಳ್ಳಬಹುದಾಗಿದೆ.

 ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಜೀರಿಗೆಯಿಂದ ತಯಾರಿಸಬಹುದಾದ ಮನೆಮದ್ದುಗಳು

* ಜೀರಿಗೆ ಕಷಾಯಕ್ಕೆ ಹಾಲು, ಜೇನು ತುಪ್ಪ ಸೇರಿಸಿ ಪ್ರತಿದಿನ ಸೇವಿಸಿದರೆ ಎದೆ ಹಾಲು ಉತ್ಪತ್ನಿಯಾಗುತ್ತದೆ.

* ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ ಕುಡಿಯುವುದರಿಂದ ಪಿತ್ತಶಮನವಾಗುತ್ತದೆ.

* ಜೀರಿಗೆ ಮತ್ತು ಶುಂಠಿಯನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟದಷ್ಟು ನೀರಿನಲ್ಲಿ ಹಾಕಿ ಕುದಿಸಿ, ಆ ಬಳಿಕ ಲಿಂಬೆರಸ, ಬೆಲ್ಲ ಸೇರಿಸಿ ದಿನಕ್ಕೆ ಮೂರು ಬಾರಿ ಊಟಕ್ಕೆ ಮೊದಲು ಕುಡಿದರೆ ಹೊಟ್ಟೆ ನೋವು ದೂರವಾಗುತ್ತದೆ.

* ಪರಂಗಿ ಕಾಯಿಯ ಹೋಳುಗಳಿಗೆ ಜೀರಿಗೆಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆರಸ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುವುದಲ್ಲದೆ, ಜಂತುಹುಳುಗಳು ನಾಶವಾಗುತ್ತದೆ.

* ಜೀರಿಗೆ, ಸಕ್ಕರೆ, ಒಣಶುಂಠಿ ಹಾಗೂ ಅಡಿಗೆ ಉಪ್ಪು ಇವು ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಬೇಕಿ, ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಜೀರಿಗೆಯನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯು ಕಡಿಮೆಯಾಗುತ್ತದೆ.

* ಜೀರಿಗೆಯನ್ನು ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆಗಳು ನಿಮ್ಮ ಹತ್ತಿರವು ಸುಳಿವುದಿಲ್ಲ.

* ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುನೋವಿನ ಸಮಸ್ಯೆಗೆ ರಾಮಬಾಣವಾಗಿದೆ. ಈ ಜೀರ್ಣಶಕ್ತಿಯು ಸುಧಾರಿಸುತ್ತದೆ.

* ಜೀರಿಗೆಯನ್ನು ಪುಡಿ ಮಾಡಿ ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧ ಲೋಟಕ್ಕಿಳಿದ ಬಳಿಕ ಹಾಲು ಸಕ್ಕರೆ ಸೇರಿಸಿ ಪ್ರತಿದಿನ ಬೆಳಗ್ಗೆ ಕುಡಿದರೆ ಬಾಯಿಹುಣ್ಣು ಶಮನವಾಗುತ್ತದೆ.

* ನೇರಳೆ ಹಣ್ಣನ್ನು ಎರಡು ಹೋಳು ಮಾಡಿ ಅದಕ್ಕೆ ಜೀರಿಗೆ ಪುಡಿ ತುಂಬಿ, ಒಂದು ರಾತ್ರಿ ಇಬ್ಬನಿ ಬೀಳುವ ಜಾಗದಲ್ಲಿಡಬೇಕು. ಮರುದಿನ ಖಾಲಿ ಹೊಟ್ಟೆಯಲ್ಲಿ ಅದರ ರಸವನ್ನು ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

* ಜೀರಿಗೆ ನೀರನ್ನು ನಿತ್ಯ ಸೇವಿಸುವುದರಿಂದ ದೇಹವನ್ನು ತಂಪಾಗಿಸುತ್ತದೆ.

 


Share to all

You May Also Like

More From Author