ಶೃಂಗೇರಿ ಭಕ್ತರ ಗಮನಕ್ಕೆ: ಕ್ಷೇತ್ರದ ದರ್ಶನ ಪಡೆಯಲು ಈ ನಿಯಮ ಪಾಲಿಸಲೇ ಬೇಕು!?

Share to all

ಚಿಕ್ಕಮಗಳೂರು:- ಶೃಂಗೇರಿ ಶಾರದಾಂಬಾ ದೇಗುಲದಲ್ಲಿ ಆಗಸ್ಟ್ 15ರಿಂದ ವಸ್ತ್ರ ಸಂಹಿತೆ ಜಾರಿಯಾಗಿದ್ದು, ಇನ್ನೂ ಮುಂದೆ ದೇವರು, ಗುರುಗಳ ದರ್ಶನಕ್ಕೆ ಬರುವವರು ಸಾಂಪ್ರದಾಯಿಕ ಉಡುಗೆಯಲ್ಲಿರುವಂತೆ ಬರುವಂತೆ ದೇಗುಲದ ಆಡಳಿತ ಮಂಡಳಿ ಸೂಚನೆ ಕೊಟ್ಟಿದೆ. ಈ ಕಾರಣ ಭಕ್ತರು ಪಂಚೆ, ಶಲ್ಯ, ದೋತಿ, ಸೀರೆ ಧರಿಸಿ ಶೃಂಗೇರಿ ದೇಗುಲವನ್ನು ಪ್ರವೇಶಿಸಬೇಕಿದೆ.

ಪುರುಷರು ಧೋತಿ, ಶಲ್ಯ ಹಾಗೂ ಉತ್ತರೀಯ ಧರಿಸಿ ಆಗಮಿಸಬೇಕಾಗುತ್ತದೆ. ಮಹಿಳೆಯರು ಸೀರೆ, ರವಿಕೆ, ಸಲ್ವಾರ್‌ ಜೊತೆಗೆ ದುಪ್ಪಟ್ಟ ಅಥವಾ ಲಂಗ ದಾವಣಿ ಧರಿಸಿಕೊಂಡು ಬರಬೇಕಾಗುತ್ತದೆ. ಹೀಗೆ ಇದ್ದಲ್ಲಿ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಸಿಗಲಿದೆ. ಇಲ್ಲದೇ ಹೋದಲ್ಲಿ ದೇಗುಲದ ಪ್ರಾಂಗಣದಲ್ಲಿ ದೇವಿಯ ದರ್ಶನ ಪಡೆಯಬೇಕಾಗುತ್ತದೆ.

ಭಾರತೀಯ ಸಂಪ್ರದಾಯವಲ್ಲದ ಅಥವಾ ದೇವಾಲಯದ ಆಡಳಿತ ಮಂಡಳಿ ತಿಳಿಸಿದ ಉಡುಪು ಧರಿಸದೇ ಇದ್ದಲ್ಲಿ ಅರ್ಧ ಮಂಟಪದ ಒಳಗೆ ಪ್ರವೇಶವಿರುವುದಿಲ್ಲ ಎಂದು ಆಡಳಿತ ಸಮಿತಿ ತಿಳಿಸಿದೆ. ಇನ್ನೂ ದೇವಸ್ಥಾನದ ಆವರಣ, ತುಂಗಾ ತೀರ, ಕಪ್ಪೆ ಶಂಕರನ ಗುಡಿ ಇಲ್ಲಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ತಾಯಿಯ ದರ್ಶನ ಮಾಡಲು ಮಾತ್ರ ಈ ನಿಯಮ ಪಾಲನೆ ಆಗಲಿದೆ.


Share to all

You May Also Like

More From Author