ಕೊಪ್ಪಳ:-ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಕತ್ತರಿಯಿಂದ ಚುಚ್ಚಿ ದಲಿತ ಯುವಕನನ್ನು ಕ್ಷೌರಿಕ ಕೊಂದಿರುವ ಘಟನೆ ಜರುಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಸ್ವಾಮಿ ಬಂಡಿಹಾಳ ಎಂಬುವವನನ್ನು ಕಟಿಂಗ್ ಮಾಡುವ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ನಿನ್ನೆ ಕಟಿಂಗ್ ಮಾಡಿಸಿಕೊಳ್ಳಲು ಯಮನೂರಸ್ವಾಮಿ ಬಂಡಿಹಾಳ ಕಟಿಂಗ್ ಶಾಪ್ಗೆ ಬಂದಿದ್ದರು. ಈ ವೇಳೆ ಕ್ಷೌರಿಕ ಮುದಕಪ್ಪ ಹಡಪದ ಹಾಗೂ ಯಮನೂರಸ್ವಾಮಿ ಬಂಡಿಹಾಳ ನಡುವೆ ಜಗಳ ಶುರುವಾಗಿತ್ತು. ಆಗ ಮುದಕಪ್ಪ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಕ್ಷೌರಿಕ ಮುದಕಪ್ಪ ಹಡಪದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎನ್ನಲಾಗುತ್ತಿದೆ.