ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 16 ವರ್ಷ ಪೂರೈಸಿದ ವಿರಾಟ್: ವಿಶ್ವ ಮೆಚ್ಚಿದ ವಿಕ್ರಮನ ಸಾಧನೆ ಅಮರ!

Share to all

ವಿಶ್ವ ಮೆಚ್ಚಿದ ವಿಕ್ರಮ. ಮನೋಜ್ಞ ಆಟದ ಮಾಯಾವಿ. ಕ್ರಿಕೆಟ್​ ರಣರಂಗದ ರಣಚತುರ. ಬೌಲರ್ಸ್​ ಪಾಲಿಗೆ ದುಸ್ವಪ್ನಕಾರ. ಬ್ಯಾಟ್ ಇರೋದು ಘರ್ಜಿಸೋಕೆ, ಸೆಂಚುರಿಗಳ ಸರಮಾಲೆ ಕಟ್ಟೋಕೆ ಅನ್ನೋದನ್ನ ತೋರಿಸಿಕೊಟ್ಟ ತ್ರಿವಿಕ್ರಮ. ಇವರು ಬೇರೆ ಯಾರು ಅಲ್ಲ ಕ್ರಿಕೆಟ್ ಲೋಕದ ರಾಜ ಕಿಂಗ್ ಕೊಹ್ಲಿ.ಎಸ್ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಗೆ 16 ವರ್ಷವಾಗಿದೆ.

ಕಿಂಗ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ ಅನ್ನು ಸೋಲಿನೊಂದಿಗೆ ಆರಂಭಿಸಿದ್ದರು. 2008, ಆಗಸ್ಟ್ 18 ರಂದು ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ್ದರು. ವಿಶೇಷ ಎಂದರೆ ಚೊಚ್ಚಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್​ಗಳಿಸಿ ಔಟಾಗಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 146 ರನ್​ಗಳಿಗೆ ಆಲೌಟ್ ಆಗಿತ್ತು.

ಆದರೆ ಇದಾದ ಬಳಿಕ ನಡೆದಿದ್ದು ಈಗ ಇತಿಹಾಸ. ಅದೇ ಕೊಹ್ಲಿ ಈಗ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾಗಿದ್ದಾರೆ. ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಬ್ಯಾಟರ್​ಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಅಂದಿನಿಂದ ಇಂದಿನವರೆಗೆ ವಿರಾಟ್ ಕೊಹ್ಲಿ 533 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 113 ಟೆಸ್ಟ್ ಪಂದ್ಯಗಳಿಂದ 29 ಶತಕ ಹಾಗೂ 7 ದ್ವಿಶತಕಗಳೊಂದಿಗೆ ಒಟ್ಟು 8848 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 295 ಇನಿಂಗ್ಸ್​ಗಳಿಂದ 13906 ರನ್ ಬಾರಿಸಿದ್ದಾರೆ. ಇದೇ ವೇಳೆ ಕೊಹ್ಲಿ ಬ್ಯಾಟ್​ನಿಂದ 50 ಶತಕ ಹಾಗೂ 72 ಅರ್ಧಶತಕಗಳು ಮೂಡಿಬಂದಿವೆ.

ಹಾಗೆಯೇ 125 ಟಿ20 ಪಂದ್ಯಗಳಲ್ಲೂ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 1 ಶತಕ ಹಾಗೂ 38 ಅರ್ಧಶತಕಗಳೊಂದಿಗೆ ಒಟ್ಟು 4188 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಕೆಲವೇ ಕೆಲವು ಬ್ಯಾಟರ್​ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟರ್ಸ್​ ಲೈಫಲ್ಲಿ ಏರಿಳಿತ ಸಹಜ. ಫೇಲ್ಯೂರ್​ ಆದಾಗ ಕುಗ್ಗಬಾರದು. ದಿಟ್ಟವಾಗಿ ಎದುರಿಸಿ, ಹಾರ್ಡ್​ ವರ್ಕ್​ ಮಾಡ್ಬೇಕು. ಆಗ ಎಂತಹ ಸೆಟ್​ಬ್ಯಾಕ್​ನಿಂದ ಬೇಕಾದ್ರೂ ಹೊರಬಂದು ಹ್ಯೂಜ್​ ಸಕ್ಸಸ್ ಕಾಣಬಹುದು ಅನ್ನೋದನ್ನ ಕಿಂಗ್ ಕೊಹ್ಲಿ ತೋರಿಸಿಕೊಟ್ಟಿದ್ದಾರೆ.


Share to all

You May Also Like

More From Author