ಬೆಂಗಳೂರು ನಗರ ಎಷ್ಟು ಕಲರ್ ಫುಲ್ ಆಗಿದ್ಯೋ ಅಷ್ಟೇ ಕರಾಳತೆಯಿಂದ ಕೂಡಿದೆ.ನಗರದಲ್ಲಿ ಯುವತಿಯರು ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಬಂದುಬಿಡುತ್ತೆ..ಇಲ್ಲಾಗಿರೋದು ಕೂಡ ಅದೇ ಒಂಟಿ ಯುವತಿಯನ್ನ ಕರೆದೊಯ್ದ ಕಾಮ ಪಿಶಾಚಿ ಮೃಗನಂತೆ ಎರಗಿ ನರಕ ತೋರಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಕಾಮುಕನನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ನಿವಾಸದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಇದೀಗ ಸಿಸಿಟಿವಿಯಲ್ಲಿನ ಬೈಕ್ ನಂಬರ್ ಆಧರಿಸಿ ಆರೋಪಿಯನ್ನು ಬೆಂಗಳೂರಿನ ಆಡುಗೋಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯೂ ಮೂಲತಃ ತಮಿಳುನಾಡು ಮೂಲದವ. ಡ್ರಾಪ್ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದನಂತೆ. ಆರೋಪಿಯನ್ನು ಕರೆದುಕೊಂಡ ಬಂದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಘಟನೆ ಹಿನ್ನೆಲೆ
ಅನ್ಯರಾಜ್ಯದ ಯುವತಿ ಬೆಂಗಳೂರಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದು ಗೆಟ್ ಟು ಗೆದರ್ ಪಾರ್ಟಿ ಅಂತಾ ಸ್ನೇಹಿತರ ಜತೆ ಹೋಗಿದ್ಲು. ಆಗಸ್ಟ್ 17ರ ರಾತ್ರಿ 1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿ ಪಾರ್ಟಿ ಮುಗಿಸಿಕೊಂಡು ವಾಪಸ್ ಬರುವಾಗ ಸ್ನೇಹಿತರಿಂದ ಬೇರ್ಪಟ್ಟಿದ್ದಾಳೆ. ಹೆಬ್ಬಗೋಡಿಯಲ್ಲಿರೋ ಮನೆ ಸೇರಬೇಕಿದ್ದ ಯುವತಿ, ಅಪರಿಚಿತನ ಬೈಕ್ ಹತ್ತಿದ್ದಾಳೆ. ಆ ಬೈಕ್‌ನಲ್ಲಿ ಡ್ರಾಪ್ ಪಡೆದವಳು ಮಾರ್ಗಮಧ್ಯೆ ಕೆಳಗಿಳಿದ್ದಾಳೆ. ಸ್ವಲ್ಪದೂರ ನಡೆದುಕೊಂಡು ಹೋದವಳು, ಮತ್ತೊಂದು ಬೈಕ್ ಹತ್ತಿದ್ದಾಳೆ. ಯುವತಿ ಮದ್ಯದ ನಶೆಯಲ್ಲಿರೋದನ್ನ ಬಂಡವಾಳ ಮಾಡಿಕೊಂಡ ಕ್ರಿಮಿ, ಬೊಮ್ಮನಹಳ್ಳಿ ಸಮೀಪದ ನಿರ್ಜನವಾದ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಸ್ಥಳದಲ್ಲೆ ಅರೆ ನಗ್ನ ಸ್ಥಿತಿಯಲ್ಲಿದ್ದ ಅಪರಿಚಿತ ಓಡಿ ಹೋಗಿದ್ದ. ಆತನ ಮುಖದ ಮೇಲೆಲ್ಲಾ ಪರಚಿತ ಗಾಯಗಳಾಗಿದ್ವು ಅಂತಾ ಸ್ನೇಹಿತರು ಮಾಹಿತಿ ಕೊಟ್ಟು ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ಯುವತಿ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾಳೆ. ಇನ್ನು ಸಂತ್ರಸ್ತ ಯುವತಿ ಹೊರ ರಾಜ್ಯದವಳಾಗಿದ್ದು, ಬೆಂಗಳೂರಿನಲ್ಲಿ ಕೊನೆ ವರ್ಷದ ಪದವಿ ಓದುತ್ತಿದ್ದಳೆ. ಸದ್ಯ BNS ಕಾಯ್ದೆ 64 ಅಡಿಯಲ್ಲಿ HSR ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿಲಾಗಿದೆ.