ಯಾದಗಿರಿ:- ಈ ಕಾಲದಲ್ಲಿ ಯರನ್ನ ನಂಬೋದು ಮರ್ರೆ. ಜೊತೆಯಲ್ಲಿದ್ದುಕೊಂಡೇ ಕತ್ತು ಕೊಯ್ದು ಬಿಡ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಪಾಪ ಅಣ್ಣ-ತಮ್ಮ ಸ್ನೇಹಿತ ಎಂದು ಕೊಂಡವರಿಂದಲೇ ಮೋಸ ಆಗಿರುವ ಎಷ್ಟೋ ಉದಾಹರಣೆ ಇವೆ. ಎಸ್ ಅಂತದ್ದೇ ಸ್ಟೋರಿ ಈಗ ಹೇಳಲು ಹೊರಟಿದ್ದೇವೆ ಕೇಳಿ. ಹೌದು, ಪಾಳುಬಿದ್ದ ಮನೆಗೆ ಕರೆದೊಯ್ದು ಪರಿಚಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿಯಲ್ಲಿ ಜರುಗಿದೆ.
ಹೇಮಂತ್ ಎಂಬಾ ಆರೋಪಿ ವಿವಾಹಿತೆ ಎಂಬುವುದನ್ನೂ ಲೆಕ್ಕಿಸದೆ ಅತ್ಯಾಚಾರ ನಡೆಸಿ ದುಷ್ಕೃತ್ಯ ಮೆರೆದಿದ್ದಾನೆ.
ಶನಿವಾರ ರಾತ್ರಿ ಘಟನೆ ನಡೆದಿದ್ದು, ನಿನ್ನೆ ರಾತ್ರಿಯಿಂದ ನಿತ್ರಾಣಗೊಂಡು ಮಹಿಳೆ ಪಾಳು ಮನೆಯಲ್ಲೇ ಬಿದ್ದಿದ್ದರು. ನಂತರ ಸ್ಥಳೀಯರು ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ. ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೇಮಂತ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.