ಬೆಂಗಳೂರು:- ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿಕೊಂಡು ವಿದ್ಯಾರ್ಥಿ ಕಿಡ್ನಾಪ್ ಮಾಡಿ ಕಿರುಕುಳ ನೀಡಿದ್ದ 9 ಜನರ ವಿರುದ್ಧ FIR ದಾಖಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೆಲ ಕಿಡಿಗೇಡಿಗಳು ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ.
ಕಿಡ್ನಾಪ್ ಮಾಡಿ ಸುಲಿಗೆ ಮಾಡಿರುವ ಕುರಿತು ನಾಲ್ವರ ವಿರುದ್ಧ ಜೀವನ್ ಜೈನ್ ಎಂಬ ವಿದ್ಯಾರ್ಥಿ ಆರೋಪ ಮಾಡಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್, ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಸಾಲ ಪಡೆದಿದ್ದ. ಇವೆಂಟ್ ಒಂದರ ವಿಚಾರವಾಗಿ ಹಣ ಪಡೆದಿದ್ದ ಜೀವನ್ ನಂತರ ಕಾರಣಾಂತರದಿಂದ ಹಣ ಕೊಡಲು ಆಗದೆ ಒದ್ದಾಡುತ್ತಿದ್ದ.
ಲೇಟಾಗಿ ಹಣ ಕೊಟ್ಟಿದ್ದಕ್ಕೆ ಕಿಡ್ನಾಪ್ ಮಾಡಿ ಬೆದರಿಸಲಾಗಿದೆ. ನಾವು ನಲಪಾಡ್ ಹುಡುಗರು, ಹತ್ತು ಲಕ್ಷ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಆರು ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದಲ್ಲದೆ ಹತ್ತು ಲಕ್ಷದವರೆಗೆ ಕೊಡಬೇಕು ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿ ತಿಳಿಸಿದ್ದಾನೆ.