ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್: ಅರ್ಜಿ ವಿಚಾರಣೆ ಆ.29ರವರೆಗೆ ಮುಂದೂಡಿ ಹೈಕೋರ್ಟ್ ಸೂಚನೆ

Share to all

ಬೆಂಗಳೂರು: ಸಿಎಂ ವಿರುದ್ದದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಅರ್ಜಿ ವಿಚಾರಣೆ, ಸಿದ್ದರಾಮಯ್ಯಗೆ ತಾತ್ಜಾಲಿಕ ರಿಲೀಫ್ ಸಿಕ್ಕಿದೆ. ಆಗಸ್ಟ್ 29 ರವರೆಗೆ ವಿಚಾರಣೆ ಮುಂದೂಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹೈಕೋರ್ಟ್ ಸೂಚನೆ ನೀಡಿದ. ಯಾವುದೇ ಬಲವಂತದ ಕ್ರಮ ಬೇಡ ನ್ಯಾಯಲಯದ ಆದೇಶ ಮಾಡಿದೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆ.29ರ ವರೆಗೆ ಯಾವುದೇ ಆದೇಶ ನೀಡಿದಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದೆ.

ಎಫ್‌ಐಆರ್ ದಾಖಲಾಗುವ ಭಯದಲ್ಲಿದ್ದ ಸಿಎಂಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಕೆಳಹಂತದ ನ್ಯಾಯಾಲಯ ವಿಚಾರಣೆಗೆ ಅಸ್ತು ಅಂದಿದ್ರೆ ಸಿಎಂ ಮೇಲೆ ಪಿಸಿಆರ್ ದಾಖಲಾಗುತ್ತಿತ್ತು. ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿತ್ತು. ಆದರೆ ಇದೀಗ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. 10 ದಿನಗಳವರೆಗೆ ವಿಚಾರಣಾ ನ್ಯಾಯಾಲಯ ಯಾವುದೇ ಆದೇಶ, ತೀರ್ಮಾನ ಪ್ರಕಟಿಸುವಂತಿಲ್ಲ ಎಂದು ಹೈಕೋರ್ಟ್‌ ಸೂಚಿಸಿದೆ.


Share to all

You May Also Like

More From Author