ಬೆಂಗಳೂರು: ಮನೆತನದ ವಂಶವನ್ನು ಬೆಳಸಬೇಕಿದ್ದ ಮಗ ನಡು ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತ ತನಗೆ ಆದ ನೋವು , ಹೆತ್ತವರನ್ನ ಕಳೆದುಕೊಂಡ ಪಡುತ್ತಿರುವ ಯಾತನೆ,ತಾನು ಪಟ್ಟ ನರಕಯಾತನೆ, ಅವಮಾನದ ಬಗೆ ಎಳೆ ಎಳೆಯಾಗಿ ಕ್ಯಾಮರಾ ಮುಂದೆ ಬಿಚ್ಚಿಡುತ್ತಿದ್ದಾನೆ..ಇದಕ್ಕೆಲ್ಲ ಕಾರಣ ಈ ಪೋಟೋದಲ್ಲಿ ಕಾಣುವ ಐವರು ಮಂಗಳಮುಖಿಯರು.. ಹೌದು ಅಲಿಯಾ ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾಗ ಅಲ್ಲಿಗೆ ಪ್ರತಿನಿತ್ಯ ಬರುತ್ತಿದ್ದ ಚೈತ್ರ,
ಕಾಜಲ್, ಪ್ರೀತಿ, ಅಶ್ವಿನಿ, ಮುಗಿಲಿನ್ ಎನ್ನುವ ಈ ಐವರು ಮಂಗಳ ಮುಖಿಯರು ನಿನಗೆ ಮನೆಕೆಲಸ ಕೊಡಿಸುತ್ತೇವೆ ತಿಂಗಳಿಗೆ ಒಳ್ಳೆಯ ಸಂಪಾದನೆ ಮಾಡಬಹುದು ನಮ್ಮ ಜೊತೆ ಬಾ ಎಂದು ಹೇಳಿ ಆರಂಭದಲ್ಲಿ ಮನೆಕೆಲಸ ಮಾಡಿಸಿಕೊಂಡು .ದಿನಕಳೆದಂತೆ ನೀನು ಹೆಣ್ಣಾಗಿ ಬದಲಾಗು ನಿನಗೆ ಕೈ ತುಂಬಾ ಕಾಸು ಬರುತ್ತೆ ಎಂದು ಲಿಂಗ ಪರಿವರ್ತನೆ ಮಾಡಿಕೊ ಎಂದು ಹಲ್ಲೆ ಮಾಡಿದ್ರಂತೆ.
ಅದಕ್ಕೆ ಒಪ್ಪದಿದ್ದಾಗ ಹದಿನೈದು ದಿನಗಳ ಕಾಲ ಕೂಡಿಹಾಕಿ ಕಣ್ಣಿಗೆ, ಮೂಗಿಗೆ ಕಾರದ ಪುಡಿ ಹಾಕಿ ಬಲವಂತವಾಗಿ ಯಾವುದೋ ಇಂಜೆಕ್ಷನ್ ಹಾಕಿದ್ರಂತೆ ಎಚ್ಚರತಪ್ಪಿದಾಗ ಮರ್ಮಾಂಗ ಕಟ್ ಮಾಡಿ ವಿಡಿಯೋ ಮಾಡಿಕೊಂಡ್ರಂತೆ.ಇವರಿಂದ ತಪ್ಪಿಸಿಕೊಂಡು ಬಂದು ಪ್ರೇಜರ್ ಟೌನ್ ನಲ್ಲಿರುವ ಮತ್ತೊಂದು ಗುಂಪಿನ ಜೊತೆಗೆ ಸೇರಿಕೊಂಡಿದ್ದಾನೆ ಅವರ ಮನೆಗೂ ಬಂದು ಮನೆಯಲ್ಲಿದ್ದ ವಸ್ತುಗಳನ್ನ ಎಸೆದು ಕೊಲೆ ಮಾಡೋದಾಗಿ ಧಮ್ಕಿ ಹಾಕಿದ್ದಾರಂತೆ,
ಈ ಐವರು ಮಂಗಳಮುಖಿಯರು. ಅಲ್ಲದೆ ನೀನು ನಮ್ಮ ಜೊತೆ ಬರದೆ ಇದ್ರೆ ನಿನ್ನ ಪ್ರಾಣ ತೆಗೆಯುತ್ತೇವೆ ಎಂದು ಧಮ್ಕಿ ಹಾಕಿದ್ದಾರಂತೆ. ನಿನ್ನೆ ಪುಲಿಕೇಶಿ ನಗರ ಠಾಣೆಗೆ ದೂರು ನೀಡಿದ್ದು FIR ದಾಖಲಿಸಿಕೊಂಡಿರೋ ಪೋಲಿಸರು ಅವರ ನ್ನ ಅರೆಸ್ಟ್ ಮಾಡಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.