ಪಾರಂಪರಿಕ ಗುಡ್ಡ ಉಳಿಸುವಂತೆ ಮನವಿ.ಮಣ್ಣು ಕೊಳ್ಳೆ ಹೊಡೆದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ.
ನವಲಗುಂದ:- ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಪಾರಂಪರಿಕ ಗುಡ್ಡದಲ್ಲಿಯ ಮಣ್ಣನ್ನು ಲೂಟಿ ಹೊಡೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನವಲಗುಂದ ನಾಗರಿಕರು ತಹಶಿಲ್ದಾರ,ಪೋಲೀಸ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ನವಲಗುಂದದಲ್ಲಿರುವ ಗುಡ್ಡದ ಸಾವಿರಾರು ಟಿಪ್ಪರ ಮಣ್ಣನ್ನು ಕೊಳ್ಳೆ ಹೊಡೆದು ಬೇರೆ ಉದ್ದೇಶಕ್ಕೆ ಬಳಸಲಾಗಿದೆ.ಅಲ್ಲದೇ ಸರಕಾರಿ ಗುಡ್ಡದ ಮಣ್ಣು ತೆಗೆದು ಕೋಟ್ಯಾಂತರ ರೂ ಹಣ ಲೂಟಿ ಹೊಡೆದಿದ್ದಾರೆ ಅಂತವರ ವಿರುದ್ದ ಕಾನೂನು ಕ್ರಮಕೈಕೊಳ್ಳಬೇಕು ಎಂದು ಒತ್ತಾಯಿಸಿ ನಗರಸಭೆ,ಪೋಲೀಸ ಹಾಗೂ ತಹಶಿಲ್ದಾರರಿಗೆ ನಾಗರಿಕರು ಮನವಿ ಸಲ್ಲಿಸಿದ್ದಾರೆ.