ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ..

Share to all

ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.. ಪ್ರಧಾನ ಮಂತ್ರಿಯವರ ಪರಿಕಲ್ಪನೆಯ ಹಾಗೂ ಕೇಂದ್ರ ಸಚಿವರ ಕನಸಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಶಾಸಕರಾದ ಎಮ್ ಆರ್ ಪಾಟೀಲ್,ಮಹೇಶ್ ತೆಂಗಿನಕಾಯಿ…..ಮುಂದುವರೆದ ಉಚಿತ ಹೋಲಿಗೆ ಯಂತ್ರ ವಿತರಣಾ ಕಾರ್ಯಕ್ರಮ…..

ಹುಬ್ಬಳ್ಳಿ

ಮಹಿಳೆಯರ ಅನುಕೂಲಕ್ಕಾಗಿ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸುವಂತಾಗಬೇಕು ಎಂಬ ಕಲ್ಪನೆಯೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಹಿಳೆಯರಿಗೆ ಉಚಿತ ಮಹಿಳಾ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈವರೆಗೆ ಈ ಒಂದು ಕೇಂದ್ರದಲ್ಲಿ 6960 ಮಹಿಳಾ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗಿದೆ. ಈ ಕೇಂದ್ರದಲ್ಲಿ ತರಬೇತಿಯೊಂದಿಗೆ ಸಮರ್ಪಕವಾದ ಮಾಹಿತಿಯನ್ನು ಕೂಡಾ ನೀಡಲಾಗಿದ್ದು ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.‌ಇನ್ನೂ ಈವರೆಗೆ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗಿದ್ದು ಪ್ರಧಾನಮಂತ್ರಿ ಅವರ ಪರಿಕಲ್ಪನೆಯಂತೆ ನಾರಿ‌ ಶಕ್ತಿ ರಾಷ್ಟ್ರದ ಶಕ್ತಿ‌ ಎಂಬಂತೆ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬನೆಯ ಜೀವನ ನಡೆಸಲು ಅವರಿಗೆ ಪೂರಕವಾಗುವಂತೆ ಇಂತಹ ಯೋಜನೆ‌ ಹಮ್ಮಿಕೊಳ್ಳಲಾಗಿದೆ.ಹೀಗಾಗಿ ಮತ್ತೆ ಮುಂದುವರೆದ ಭಾಗವಾಗಿ ಇಂದು ಮತ್ತೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಅವರ ಉತ್ತಮ ಭವಿಷ್ಯಕ್ಕಾಗಿ ಹಾರೈಸಲಾಯಿತು. ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಶಾಸಕರಾದ ಮಹೇಶ್ ತೆಂಗಿನಕಾಯಿ ,ಎಮ್ ಆರ್ ಪಾಟೀಲ್ , ಮಾಜಿ ವಿಧಾನಪರಿಷತ್ ಸದಸ್ಯರಾದ ನಾಗರಾಜ‌ ಛಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author